ದ್ವಾಪರ

Author : ಕಂನಾಡಿಗಾ ನಾರಾಯಣ

Pages 364

₹ 250.00

Buy Now


Year of Publication: 2015
Published by: ನವಕರ್ನಾಟಕ ಪ್ರಕಾಶನ
Phone: 080-22203580

Synopsys

ಕವಿಗಳು, ಕತೆಗಾರರಲ್ಲದೆ ಸಂಶೋಧಕರೂ ಮಹಾಭಾರತವನ್ನು ಒಂದು ಐತಿಹ್ಯವಾಗಿ ಕಂಡು, ಅದರ ಒಳಹೊರಗನ್ನು ವಿಶ್ಲೇಷಿಸಿದ್ದಾರೆ. ಇರಾವತಿ ಕರ್ವೆಯ 'ಯುಗಾಂತ' ಈ ನಿಟ್ಟಿನಲ್ಲಿ ಮಹಾಭಾರತ ಪಾತ್ರ ವಿಶ್ಲೇಷಣೆಯಲ್ಲಿ ಅಪರೂಪದ ಕೃತಿ. ಕನ್ನಡದಲ್ಲಿಯೂ ಮಹಾಭಾರತವನ್ನು ಹಿನ್ನೆಲೆಯಾಗಿಟ್ಟು ಹಲವು ಕವಿಗಳು, ಕತೆಗಾರರು, ಕಾದಂಬರಿಕಾರರು ಬರೆದಿದ್ದಾರೆ. ಎಸ್. ಎಲ್. ಭೈರಪ್ಪ ಅವರ 'ಪರ್ವ' ಕಾದಂಬರಿ ಈ ನಿಟ್ಟಿನಲ್ಲಿ ಒಂದು ಅಪರೂಪದ ಕೃತಿಯಾಗಿದೆ. ಪುರಾಣವನ್ನು, ಮನುಷ್ಯಲೋಕದಲ್ಲಿಟ್ಟು ನೋಡಿದ ಕಾದಂಬರಿ ಅದು. ಕಂನಾಡಿಗಾ ನಾರಾಯಣ ಅವರು ಬರೆದಿರುವ “ದ್ವಾಪರ' ಈ ನಿಟ್ಟಿನಲ್ಲಿ ಇನ್ನೊಂದು ಪ್ರಯತ್ನ. ಸಂಕೀರ್ಣ ಮಹಾಭಾರತಕ್ಕೊಂದು ವಿಭಿನ್ನ ವಿಶ್ಲೇಷಣೆ ಎಂದು ಅವರೇ ಇಲ್ಲಿ ಹೇಳಿಕೊಂಡಿದ್ದಾರೆ. ವಿವಿಧ ಸಂದರ್ಭ, ಸನ್ನಿವೇಶಗಳನ್ನು ಆಯಾ ಪಾತ್ರಗಳು ಮನೋವೈಜ್ಞಾನಿಕವೆನ್ನುವಂತೆ ವಿಶ್ಲೇಷಿಸುತ್ತ, ತಮ್ಮ ತಮ್ಮ ಅಂತರಂಗದ ತುಮುಲಗಳನ್ನು ಶೋಧಿಸಿಕೊಳ್ಳುತ್ತಲೇ, ವಾಸ್ತವವನ್ನು ಉಧ್ಯಸ್ತಗೊಳಿಸುತ್ತ, ವೈಚಾರಿಕ ವೈಜ್ಞಾನಿಕವಾಗಿ ವರ್ತಮಾನದ ಒರೆಗಲ್ಲಿಗೆ ಹಚ್ಚುತ್ತಾ, ಮಿಥ್‌ಗಳನ್ನು ಒಂದೊಂದಾಗಿ ಒಡೆಯುತ್ತಾ ಈ ಕೃತಿಯು  ಸಾಗುತ್ತದೆ.

About the Author

ಕಂನಾಡಿಗಾ ನಾರಾಯಣ

ಕಥೆಗಾರ ಕಂನಾಡಿಗಾ ನಾರಾಯಣ ಅವರದು ಕನ್ನಡ ಕಥನ ಪರಂಪರೆಯಲ್ಲಿ ಒಂದು ವಿಶಿಷ್ಟ ಸಂವೇದನೆ. ಪ್ರಾಣಿಲೋಕದೊಳಗಿನ ಮನುಷ್ಯ ಜಗತ್ತು. ಮನುಷ್ಯನೊಳಗಿರುವ ಮೃಗಲೋಕ ಎರಡರ ತಾಕಲಾಟಗಳನ್ನೂ ಒಂದು ಹದದಲ್ಲಿ ಹಿಡಿಯುವ ಇವರ ಕತೆಗಳು ಹೊಸ ಜಗತ್ತೊಂದನ್ನು ತೆರೆದಿಡುತ್ತವೆ. ಹಾಗೆಂದು ಇವೆರಡೇ ಇವರ ಆಸಕ್ತಿಯ ವಿಷಯವಲ್ಲ. ಸಮಾಜದಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ತಮ್ಮದಲ್ಲದ ತಪ್ಪಿಗೆ ಸಂದಿಗ್ಧತೆಯನ್ನು ಅನುಭವಿಸುವ ಅನೇಕ ಬಗೆಯ ಜನರ ನೋವುಗಳನ್ನು ಸೂಕ್ಷ್ಮವಾಗಿ ನಾರಾಯಣ ಅವರು ಹಿಡಿದಿಡುತ್ತಾರೆ. ಇಂತಹ ಮನುಷ್ಯ ವೇದನೆಯ ಕತೆಗಳನ್ನು ಕಡೆಯುವಾಗ ಕೊಂಚ ಜನಪ್ರಿಯ ದಾರಿಯನ್ನು ಹಿಡಿಯುವ ನಾರಾಯಣ ಅವರ ಕಥೆಗಳು ಪ್ರಾಣಿಗಳ ಲೋಕದ ತಾಕಲಾಟಗಳನ್ನು ಕಾಣಿಸಹೊರಟಾಗ ...

READ MORE

Reviews

(ಹೊಸತು, ಜುಲೈ 2015, ಪುಸ್ತಕದ ಪರಿಚಯ)

ಇದುವರೆಗಿನ ನಮ್ಮ ಗ್ರಹಿಕೆಯ ಮಹಾಭಾರತದ ಪಾತ್ರಗಳೇ ಬೇರೆ. ಪುರಾಣಕಾವ್ಯದಲ್ಲಿ ಪಾಂಡವರು ಧರ್ಮಿಷ್ಠರು, ಸುಯೋಧನ ದುಷ್ಟ, ಕರ್ಣ ಜಾತಿಹೀನ, ವಿದುರ ಧರ್ಮಾತ್ಮ, ಭೀಷ್ಮ ಆಜನ್ಮ ಬ್ರಹ್ಮಚಾರಿ ಮಾತ್ರವಲ್ಲ, ಮಹಾಪ್ರತಿಜ್ಞೆಗೈದವನು. ಕೃಷ್ಣನಂತೂ ದೇವಾಂಶ ಸಂಭೂತನಾಗಿ ಧರ್ಮಗ್ಲಾನಿಯಾದಾಗ ಅವತರಿಸಿದ ಸಾಕ್ಷಾತ್ ಮಹಾವಿಷ್ಣು! ಆದರೆ... ಸ್ವಲ್ಪ ಸಾಧ್ಯತೆಗಳತ್ತ ಹೊರಳೋಣ. ಅರಮನೆಯಲ್ಲಿ ಇದ್ದ ಸ್ವಚ್ಛಾಪ್ರವೃತ್ತಿಯಿಂದ ಅನಾಹುತಗಳಾದವೆ ? ಮಹಾಭಾರತದ ಪಾತ್ರಗಳನ್ನೆಲ್ಲ ಅವರವರ ನಡೆ-ನುಡಿ ಗಳೊಂದಿಗೆ ವಿಶ್ಲೇಷಿಸಿ ಕಥೆಯ ಚೌಕಟ್ಟಿನಲ್ಲೇ ನೋಡಿದರೆ ಬೇರೊಂದು ದೃಷ್ಟಿಕೋನದಲ್ಲಿಟ್ಟು ನೋಡೋಣ. ಅಲ್ಲಿ ಮನುಷ್ಯ ಸ್ವಭಾವದ ಅಪರೂಪದ ಗುಣವೊಂದು ಪರಿಚಯವಾಗುತ್ತದೆ. ಪೂರ್ವಗ್ರಹ ಗಳಿಂದ ಮುಕ್ತವಾದ ವಾತಾವರಣದಲ್ಲಿ ಪಾತ್ರಗಳನ್ನು ಸಾಧ್ಯತೆಗಳತ್ತ ಗಮನ ಕೊಟ್ಟು ನೋಡಿದಾಗ ನಿಜರೂಪ ಅನಾವರಣಗೊಳ್ಳುತ್ತದೆ. ಸುಯೋಧನನ ಹೆಸರನ್ನು ದುರ್ಯೋಧನ ಎಂದು ಬದಲಿಸಿದ್ದು ಯಾರು ಯಾವಾಗ ? ಜೂಜುಕೋರ ಧರ್ಮ, ದೇಹದಾರ್ಡ್ಯವಷ್ಟೇ ಇರುವ ಭೀಮ, ಅಣ್ಣನ ಮಾತೆಂದರೆ ಒಳಗೊಳಗೇ ಧುಮುಗುಟ್ಟುವ ಇಲ್ಲದ ನಕುಲ-ಸಹದೇವರು. ಮಾತುಮಾತಿಗೆ ಆ ಸಹನೆ ತೋರಿ ನ್ಯಾಯ ಕೇಳುವ ದೌಪದಿ - ಎಲ್ಲರೂ ಒಗ್ಗಟ್ಟಾಗಿ ಇದ್ದುದು ನಿಜವೆ ? ಮಹಾಭಾರತದಲ್ಲಿ ವೈಭವೀಕರಣ ಗೊಂಡ ಪಾತ್ರಗಳನ್ನೂ ಇಲ್ಲಿ ವಿಶ್ಲೇಷಣೆಗೆ ಒಳಪಟ್ಟಿ ಪಾತ್ರಗಳನ್ನೂ ಅಕ್ಕಪಕ್ಕದಲ್ಲಿ ಇಟ್ಟು ತಕ್ಕಡಿಯಲ್ಲಿಟ್ಟು ತೂಗಿ ನೋಡಿ ! ವಿಭಿನ್ನ ದೃಷ್ಟಿಯಿಂದ ರಚಿಸಲಾದ ಕೃತಿ ಇದು.

Related Books