
ಉದ್ದಾನೇಶ ಚರಿತ್ರೆ ಎಂಬ ಪುಸ್ತಕವು ಚನ್ನಪ್ಪ ಎರೇಸೀಮೆ ಅವರ ಕೃತಿಯಾಗಿದೆ. ಈ ಕೃತಿಯಲ್ಲಿ ಶ್ರೀ ಸಿದ್ದಗಂಗಾಕ್ಷೇತ್ರವು ಭಾರತದಲ್ಲಿ ಇಂದು ಜ್ಞಾನ ವಿಜ್ಞಾನಗಳ ಒಂದು ಗಣನೀಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳ ಪವಿತ್ರ ಸ್ಥಳವೆಂದೂ, ಎಲ್ಲಕ್ಕೂ ಮಿಗಿಲಾಗಿ ವೀರಶೈವ ಪರಂಪರೆಯ ಮಹಾ ದಾಸೋಹ ಕ್ಷೇತ್ರವೆಂದೂ, ಸಮಸ್ತ ಮಾನವ ಸಂಸ್ಕೃತಿಯನ್ನು ಗೌರವಿಸುವ ಸ್ಥಾನವೆಂದೂ, ಪ್ರಖ್ಯಾತವಾಗಿ ದೇಶವಿದೇಶಗಳ ವಿಚಾರವಾದಿಗಳ ಗಮನ ಸೆಳೆದಿದೆ. ಈ ಕ್ಷೇತ್ರ ಸಮಸ್ತ ಜನಾಂಗದ ಅನುಕೂಲಕ್ಕಾಗಿ ಅನೇಕ ಮುಖದಲ್ಲಿ ರಚನಾತ್ಮಕ ಕಾರ್‍ಯ ಗೌರವದಲ್ಲಿ ತೊಡಗಿ ನವಭಾರತ ನಿರ್ಮಾಣ ಕಾರ್ಯದಲ್ಲಿ ಶಕ್ತಿಮೀರಿ ಶ್ರಮಿಸಿದೆ: ಶ್ರಮಿಸುತ್ತಿದೆ. ಎಂಬುದನ್ನು ಈ ಪುಸ್ತಕದಲ್ಲಿ ಹೊರತರಲಾಗಿದೆ.
©2025 Book Brahma Private Limited.