ಶೈವತತ್ವ

Author : ಸದಾಶಿವಯೋಗಿ

Pages 100

₹ 75.00




Year of Publication: 2011
Published by: ಶ್ರೀ ಗುರುಕುಲ ಪ್ರಕಾಶನ
Address: # 35, ಪ್ರತಿಕ್ಷಾ, ಶಿಟ್ಲಾ ಮಾತಾ ಮಂದಿರ ಸಮೀಪ, ನಾಗಪುರ-440018 (ಮಹಾರಾಷ್ಟ್ರ)

Synopsys

ಹಿರಿಯ ಲೇಖಕ ಸದಾಶಿವಯೋಗಿ ಅವರು ಬರೆದ ಧಾರ್ಮಿಕ ಕೃತಿ-ಶೈವತತ್ವ. ಶೈವತತ್ವವು ಶಿವತತ್ವವೇ ಆಗಿದೆ ಎಂಬುದು ಲೇಖಕರ ಚಿಂತನೆ. ವಿಶ್ವದ ಸೃಷ್ಟಿ-ರಕ್ಷಣೆ-ಲಯಗಳಿಗೆ ಮೂಲ ಕಾರಣನೇ ತ್ರಿಮೂರ್ತಿಗಳು ಎಂಬ ನಂಬಿಕೆ ಹಿಂದೂಗಳಲ್ಲಿದೆ. ಅವುಗಳ ಪೈಕಿ ಶೈವತತ್ವ ಎಂಬುದು ಹಿಂದೂ ಜನರಿಗೆ ಅತ್ಯಂತ ಗೌರವಯುತ ಜೀವನ ತತ್ವ. ಈ ಶೈವತತ್ವವು ಧರ್ಮ ಮಾತ್ರವಲ್ಲ; ಸೇವಾ ಮನೋಭಾವದೊಂದಿಗೆ ಬೆರೆತುಕೊಂಡಿದೆ. ತ್ಯಾಗ-ಮತ್ತೊಬ್ಬರ ಸಂತೃಪ್ತಿಯಲ್ಲಿ ತನ್ನ ಸಂತೃಪ್ತಿಯನ್ನು ಕಾಣಬಯಸುತ್ತದೆ. ಶೈವತತ್ವವು ಸಮಸ್ಯೆಗಳನ್ನು ಎದುರಿಸುವ ಹಾಗೂ ರಕ್ಷಣಾತ್ಮಕತೆಯನ್ನೂ ಒಳಗೊಂಡಿದೆ. ಹೀಗಾಗಿ, ಶೈವತತ್ವದಲ್ಲಿ ಅಗಾಧ-ಅಪಾರ-ವಿರಾಟ ಶಕ್ತಿ ಒಳಗೊಂಡಿದೆ ಎಂದು ಹಿಂದೂ ಧರ್ಮವು ನಂಬುತ್ತದೆ. ಈ ಕುರಿತು ಲೇಖಕರು ವಿವರಿಸಿದ್ದಾರೆ.

About the Author

ಸದಾಶಿವಯೋಗಿ

.ಸದಾಶಿವಯೋಗಿ ಅವರು ಯೋಗಿಯ ವೇಷದಲ್ಲಿರುವ ವಿಚಾರವಾದಿಗಳು. ವೈಜ್ಞಾನಿಕ ಸಮಾಜ ನಿರ್ಮಾಣದ ಆಶಯ ಹೊಂದಿದ್ದವರು. ಇವರ ಪೂರ್ವಾಶ್ರಮದ ಹೊಸರು- ತಿಪಟೂರಿನ ಸದಾಶಿವಯ್ಯ. ಹಂಪಿಯ ವಿರೂಪಾಕ್ಷ ದೇವರ ಗುಡಿಯ ಎಡ ಮಗ್ಗಲಿಗೆ ಹೊಳೆಯ ದಂಡೆಯ ಮೇಲೆ ಶಿವಾನಂದಾಶ್ರಮವಿದೆ. ಈ ಆಶ್ರಮದ ಸ್ಥಾಪಕರು.   ಶೈವತತ್ವ, ನಾ ಕಂಡ ರಾಮಾಯಣ, ಭಾರತೀಯರಿಗೆ ಭಗವಂತರೆಷ್ಟು? ಯೋಚಿಸಿ ನೋಡಿ ಇತ್ಯಾದಿ ಕೃತಿಗಳ ಮೂಲಕ ಮೌಢ್ಯವನ್ನು ವಿರೋಧಿಸಿದ್ದು, ಅವರ ಕೃತಿಗಳು ವೈಜ್ಞಾನಿಕತೆಯ ಜ್ಯೋತಿ ಬೆಳಗುತ್ತವೆ.  ...

READ MORE

Excerpt / E-Books

(ಹೊಸತು, ಮಾರ್ಚ್ 2012, ಪುಸ್ತಕದ ಪರಿಚಯ)

ಇದು ಹಂಪಿಯ ಶಿವಾನಂದ ಯೋಗಾಶ್ರಮದ ಸದಾಶಿವಯೋಗಿಯವರ ಚಿಂತನಶೀಲ ಕೃಷಿ, ಮನುಷ್ಯ ತನ್ನ ಜೀವನದಲ್ಲಿ ಶೈವಶತ್ವವನ್ನು ಅಳವಡಿಸಿಕೊಂಡು ರಾಶ್ವತ ಶಾಂತಿ, ಜ್ಞಾನ ಮತ್ತು ಆನಂದವನ್ನು ಪಡೆಯಬಹು ದೆಂಬುದು ಈ ಕೃತಿಯ ಸಂದೇಶ ತನ್ನೊಳಗೆ ಅಂತರ್ಗತ ದಾಗಿರುವ ಪ್ರಾಣಚೈತನ್ಯವನ್ನು ದೇಹದ ಒಳಕ್ಕೂ ಹೊರಕ್ಕೂ ಪ್ರಕೃತಿಗೆ ಅನುಗುಣವಾಗಿ ಶ್ವಾಸೋಚ್ಛಾಸದ ಮೂಲಕ ನಿಯಂತ್ರಿಸುತ್ತ ಪ್ರಾಣಾಯಾಮದಿಂದ ದೇಹ ಸ್ವಾಸ್ಥ್ಯ ಕಾಪಾಡಿಕೊಂಡು ಬರುವುದು ಮುಖ್ಯ. ಬಾಹ್ಯ ಆಕರ್ಷಣೆಗಳಿಂದ ಮನಸ್ಸು ಚಂಚಲಗೊಂಡು ವಿಚಲಿತ ದಾಗದಿರಲು ಮನಸ್ಸನ್ನು ಅಂತರ್ಮುಖಿಯಾಗಿಸಿ ಸಾಧನೆ ಮಾಡಿದರೆ ಶ್ರೇಷ್ಠಭಾಗವನ್ನು ಪಡೆದು ಯೋಗಿ ಎನಿಸುತ್ತಾನೆ. ಇಲ್ಲಿ ಯೋಗ ಮತ್ತು ಪ್ರಾಣಾಯಾಮಗಳದ್ದೇ ಮೇಬಗ್ಗೆ. ಶೈವಧರ್ಮ ಮತ್ತು ವೈದಿಕ ಧರ್ಮದ ವ್ಯತ್ಯಾಸಗಳನ್ನು ಸರಿಯಾಗಿ ಗುರುತಿಸಿ, ಯಾವುದೇ ಯಲ್ಲ - ಯಾಗ ಅರ್ಥವಿಲ್ಲದ ಮಂತ್ರೋಚ್ಚಾರಣೆ - ಕರ್ಮಸಿದ್ಧಾಂತಗಳಿಂದ ಯಾವುದೇ ಸಿದ್ಧಿಯಾಗಲಾರದೆಂದು ಇಲ್ಲಿನ ಅಭಿಮತ ದೈವತತ್ವದ ವಿವರಣೆ, ಶೈವ ಲಾಂಛನಗಳ ಬಗ್ಗೆ, ಮೌಲಿಕ drote *ಲೋಕದಲ್ಲಿ ನೀನು ಹುಡುಕುತ್ತಿದ್ದೀಯೋ ಅದೆಲ್ಲವೂ ನಿನ್ನೆಲ್ಲೇ ಅಂತರ್ಗತವಾಗಿ ಸೂಕ್ಷ್ಮ ರೂಪದಲ್ಲಿದೆ ನಿನ್ನಲ್ಲಿಲ್ಲದ ಯಾವುದನ್ನೂ ನೀಡು ಹೊರಜಗತ್ತಿನಲ್ಲಿ ಕಾಣಲಾರ" ಎಂಬ ಪರಮಸತ್ವವನ್ನು ಪ್ರತಿಪಾದಿಸಲಾಗಿದೆ. ಅಧ್ಯಾತ್ಮದಲ್ಲಿನ ವೈಚಾರಿಕ ಎಳೆಗಳಲ್ಲಿ ಎದರಿಸಲಾಗಿದೆ. ಸದಾಶಿವಯೋಗಿಗಳು ಬರೆದಿರುವ “ಭಾರತೀಯರಿಗೆ ಭಗವಂತರನ್ನು?' ಎಂಬ ವೈಚಾರಿಕ ಕೃತಿಯನ್ನು ನವಕರ್ನಾಟಕ ಪ್ರಕಟಿಸಿದೆ.

Related Books