
ತುಂಗಾ ತೀರದ ಮಂತ್ರಾಲಯ ಕ್ಷೇತ್ರದ ಗುರು ರಾಘವೇಂದ್ರ ರಾಯರ ಮಹಿಮೆಯನ್ನು ವಿವರಿಸುವ ವಿಶಿಷ್ಟ ಪುಸ್ತಕ. ಜನಮನದಲ್ಲಿ ನೆಲೆಸಿರುವ ಗುರುರಾಯರ ಕುರಿತ ಸಂಗತಿಗಳನ್ನು ಅಕ್ಷರಕ್ಕೆ ಇಳಿಸುವ ಕೆಲಸವನ್ನು ಯು.ಪಿ. ಪುರಾಣಿಕ್ ಅವರು ಮಾಡಿದ್ದಾರೆ. ಈ ಪುಸ್ತಕ 23 ಅಧ್ಯಾಯಗಳಲ್ಲಿದೆ. ರಾಘವೇಂದ್ರರ ಜೀವನ ಚರಿತ್ರೆ, ಅವತಾರ, ರಾಯರ ವಿಚಾರಧಾರೆ, ಪವಾಡಗಳನ್ನು ಕುರಿತು ಲೇಖಕರು ವಿವರವಾಗಿ ಬರೆದಿದ್ದಾರೆ. ಗುರುರಾಯರನ್ನು ಕುರಿತು ಸಂಪೂರ್ಣ ಮಾಹಿತಿ ನೀಡುವ ಲೇಖಕರ ಪ್ರಯತ್ನ ಶ್ಲಾಘನೀಯ. ರಾಘವೇಂದ್ರರ ವಂಶಾವಳಿ, ರಾಯರ ಬೃಂದಾವನ ಪ್ರವೇಶ ಹಾಗೂ ನಂತರ ನಡೆದ ಪವಾಡಗಳು ಕುತೂಹಲ ಹುಟ್ಟಿಸುವ ಹಾಗಿವೆ.
©2025 Book Brahma Private Limited.