ವೈಷ್ಣವ ಸಂತರು

Author : ಫಕೀರ (ಶ್ರೀಧರ ಬನವಾಸಿ ಜಿ.ಸಿ.)

Pages 316

₹ 300.00




Year of Publication: 2020
Published by: ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್
Address: #99, ಶ್ರೀರಕ್ಷ, ಇಟ್ಟಮಡು ಮುಖ್ಯರಸ್ತೆ, ಬಿಎಸ್ ಕೆ 3ನೇ ಹಂತ, ಬೆಂಗಳೂರು- 560085
Phone: 9740069123

Synopsys

‘ವೈಷ್ಣವ ಸಂತರು’ ಶ್ರೀಚೈತನ್ಯ ಮಹಾಪ್ರಭುಗಳ ಭಕ್ತಪರಂಪರೆ ಕುರಿತು ಬರೆದ  ಶ್ರೀಧರ ಬನವಾಸಿ ಅವರ ಕೃತಿ. ಚಿಂತಕ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಮುನ್ನುಡಿ ಬರೆದಿದ್ದಾರೆ. ಬಂಗಾಲದ ಮಹಾಸಂತರ ಜೀವನದ ಮೇಲೆ ಬೆಳಕು ಚೆಲ್ಲುವ ಕೃತಿಯಾಗಿದೆ. ‘ಶ್ರೀಧರ ಬನವಾಸಿ ಅವರು ಉತ್ತಮ ಲೇಖಕರು. ಅವರು ಕತೆ, ಕವಿತೆಗಳ ಮೂಲಕ ಸೃಜನಶೀಲ ನೆಲೆಯಲ್ಲಿ ಪ್ರಸಿದ್ಧರಾಗಿದ್ದಾರೆ. ಇದೀಗ ಭಕ್ತಿಪರಂಪರೆಯ ವೈಷ್ಣವ ಸಂತರನ್ನು ಕನ್ನಡಿಗರಿಗೆ ಪರಿಚಯ ಮಾಡಿಕೊಡುವ ಮಹತ್ತರ ಕಾರ್ಯದಲ್ಲಿ ನಿಮಗ್ನರಾಗಿದ್ದಾರೆ. ಆ ಶ್ರಮದ ಫಲರೂಪವೇ `ವೈಷ್ಣವ ಸಂತರು’ ಎಂಬ ಉತ್ತಮ ಕೃತಿ.

ಇದು ಹದಿನೆಂಟು ಜನ ಸಂತರ ಜೀವನ-ಸಾಧನೆಗಳನ್ನು ಪರಿಚಯಿಸುತ್ತದೆ. ಶ್ರೀಚೈತನ್ಯ ಮಹಾಪ್ರಭುಗಳಿಂದ ಈ ಕೃತಿ ಪ್ರಾರಂಭಗೊಂಡು ಶ್ರೀಲ ಪ್ರಭುಪಾದರ ಪರಿಚಯದೊಂದಿಗೆ ಮುಗಿಯುತ್ತದೆ. ಒಬ್ಬೊಬ್ಬ ಸಂತರ ಸಂಕ್ಷಿಪ್ತ ಜೀವನ ವಿವರಗಳನ್ನು ಕಟ್ಟಿಕೊಡುವ ಚಿತ್ರಣವು ವಿಶಿಷ್ಟವಾಗಿ ಮೂಡಿ ಬಂದಿದೆ’. ಎನ್ನುತ್ತಾರೆ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್.

ಶ್ರೀಧರ ಬನವಾಸಿ ಒಬ್ಬ ಉತ್ತಮ ಕಥನಕಾರರಾಗಿದ್ದು, ಅವರ ಪರಿಣಿತ ಪ್ರಜ್ಞೆ ಸೃಜನಶೀಲತೆಯ ಆವರಣದಲ್ಲಿ ಕೈಗೂಡಿದೆ. ಈ ಕಾರಣದಿಂದ ಅಪೂರ್ವಘಟನೆ, ಪ್ರಸಂಗಗಳನ್ನು ತೆಗೆದುಕೊಂಡು ಪ್ರಸ್ತುತ ಕೃತಿಯನ್ನು ಅಮೋಘವೆಂಬಂತೆ ರಚಿಸಿದ್ದಾರೆ.

About the Author

ಫಕೀರ (ಶ್ರೀಧರ ಬನವಾಸಿ ಜಿ.ಸಿ.)
(06 February 1985)

'ಫಕೀರ’ ಎಂಬ ಅಂಕಿತದಲ್ಲಿ ಬರೆಯುವ ಶ್ರೀಧರ ಬನವಾಸಿ ಅವರು ಕತೆ-ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿ 1985 ಫೆಬ್ರುವರಿ 6 ರಂದು ಜನಿಸಿದರು. ಬನವಾಸಿ ಉಜಿರೆ ಹಾಗೂ ದಾವಣಗೆರೆಯಲ್ಲಿ ಶಿಕ್ಷಣಾಭ್ಯಾಸ ಪೂರ್ಣಗೊಳಿಸಿ ಮೆಕ್ಯಾನಿಕಲ್ ಎಂಜನಿಯರಿಂಗ್, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಅಧ್ಯಯನ ಮಾಡಿದ್ದಾರೆ. ಕಾಲೇಜು ದಿನಗಳಿಂದಲೇ ಕತೆ, ಕಾವ್ಯ, ಅಂಕಣ ಬರಹಗಳಲ್ಲಿ ಆಸಕ್ತಿ ಇರುವ ಅವರು ‘ಅಮ್ಮನ ಆಟ್ರೋಗ್ರಾಫ್’, ’ದೇವರ ಜೋಳಿಗೆ’, ’ಬ್ರಿಟಿಷ್ ಬಂಗ್ಲೆ’, ‘ಬೇರು’ ಪುಸ್ತಕಗಳ ಮೂಲಕ ಕನ್ನಡ ಕಥಾಕ್ಷೇತ್ರದಲ್ಲಿ ಮಹತ್ವದ ಕಥೆಗಾರರಾಗಿ ಶ್ರೀಧರ ಬನವಾಸಿ ಗುರುತಿಸಿಕೊಂಡಿದ್ದಾರೆ. ಶ್ರೀಧರ್ ಅವರು ಹಲವು ವರ್ಷಗಳ ಕಾಲ ಮಾಧ್ಯಮ ಮತ್ತು ...

READ MORE

Related Books