ಋಗ್ವೇದ ಸಂಹಿತಾ ಭಾಗ-8

Author : ಎಚ್.ಪಿ. ವೆಂಕಟರಾವ್ ಶರಣ್ಮಾ

Pages 832

₹ 225.00




Year of Publication: 2009
Published by: ಕನ್ನಡ ಮತ್ತು ಸಂಸ್ಕೃತಿ ಇಲಾಖೆ
Address: ಕನ್ನಡ ಭವನ ಜೆ.ಸಿ ರಸ್ತೆ ಬೆಂಗಳೂರು- 560002

Synopsys

`ಋಗ್ವೇದ ಸಂಹಿತಾ ಭಾಗ-8’ ಕೃತಿಯು ಎಚ್. ಪಿ. ವೆಂಕಟರಾವ್ ಶರಣ್ಮಾ ಅವರ ಅಧ್ಯಯನ ಕೃತಿಯಾಗಿದೆ. ಈ ಕೃತಿಯು ಕೆಲವೊಂದು ವಿಚಾರಗಳನ್ನು ಹೀಗೆ ವಿವರಿಸಿದೆ : ಋಕ್ಸಂಹಿತೆಯ ಈ ಭಾಗದಲ್ಲಿ ಪ್ರಥಮ ಮಂಡಲದ 95 ರಿಂದ 112ರವರೆಗೆ ಕುತ್ಸ ಋಷಿದೃಷ್ಟವಾದ 18 ಸೂಕ್ತಗಳಿರುವುವು. ವೈಶ್ವಾನಾರಾದಿ ಅವಿರ್ಭವಿಸುವ ವೈಶ್ವಾನಾರದಿ ರೂಪಗಳಲ್ಲಿ ಅನುಭವಿಸುವ ಅಗ್ನಿ, ಇಂದ್ರ, ವಿಶ್ವದೇವತೆಗಳು, ಇಂದ್ರಾಗ್ನೀ, ಋಭುಗಳು ಮತ್ತು ಅಶ್ವಿನೀದೇವತೆಗಳು ಈ ಸೂಕ್ತದ  ದೇವತೆಗಳು. ಸಂಪತ್ಪ್ರದರಾದ ಈ ದೇವತೆಗಳನ್ನು ಉದ್ವೇಶಿಸಿ ಪ್ರಾರ್ಥನೆಯನ್ನು ಮಾಡುವುದೇ ಈ ಸೂಕ್ತಗಳ ಮುಖ್ಯಲಕ್ಷ್ಮಣವಾದರೂ, ಕುತ್ಸೃಷಿಯ ಪ್ರಾರ್ಥನೆಯಲ್ಲಿ ಒಂದು ಅತಿಶಯದ ವೈಶಿಷ್ಟ್ಯವಿದೆ. ಉದಾತ್ತವಾದ ಭಾವಗಳನ್ನೊಳಗೊಂಡಿರುವುದೂ, ಉತ್ತಮವಾದ ಶೈಲಿಯಿಂದ ಕೂಡಿರುವುದೂ, ಸುಂದರವೂ ಆದ ಕುತ್ಸನ ಕಾವ್ಯಸೃಷ್ಟಿಯ ಇವೆಲ್ಲವನ್ನೂಇನ್ನೂ ಅಧಿಕವಾಗಿ ಪ್ರಕಾಶಿಸುವಂತೆ ಮಾಡುವ ನೈತಿಕವಾದ ಆದರ್ಶದಿಂದ ಕೂಡಿ ಅತ್ಯುತ್ತಮವಾದ ಸ್ಥಾನವನ್ನು ಪಡೆದಿದೆ. ಪ್ರಾರ್ಥಿವ ಜೀವನದ ಪುಷ್ಟಿಗೆ ಸಾಧಕವಾದ ಸಕಲಸಂಪತ್ತುಗಳೂ ನೈತಿಕವಾದ ಶುದ್ದಿಯನ್ನು ಹೊಂದಿರಬೇಕು. ಆ ಸಂಪತ್ತನ್ನು ಪಡೆಯಲು ಯಜ್ಞಕರ್ತನು ಯಜ್ಞಯಾಗಾದಿಕರ್ಮಗಳನ್ನು ಅನುಷ್ಠಾನ ಮಾಡುತ್ತಾ ದೈವಾನುಗ್ರಹಕ್ಕೆ ಅರ್ಹವಾಗಿರಬೇಕು ಎಂದು ವಿಶ್ಲೇಷಿಸಲಾಗಿದೆ.

About the Author

ಎಚ್.ಪಿ. ವೆಂಕಟರಾವ್ ಶರಣ್ಮಾ

ಅನುವಾದಕ ಎಚ್.ಪಿ. ವೆಂಕಟರಾವ್ ಶರಣ್ಮಾ ಅವರು ಮೈಸೂರು ಅರಮನೆಯ ಆಸ್ಥಾನ ವಿದ್ಯಾಂಸರಾಗಿದ್ದರು. ವೇದ ಪಾರಂಗತರು. ಋಗ್ವೇದ ಸಂಹಿತಾ ಸಂಶೋಧನಾ ವಿಚಾರದಡಿ 30  ಕೃತಿಗಳನ್ನು ಪ್ರಕಟಿಸಿದ್ದಾರೆ. ಕೃತಿಗಳು : ಋಗ್ವೇದ ಸಂಹಿತೆ ಭಾಗ-1, ಋಗ್ವೇದ ಸಂಹಿತೆ ಭಾಗ-2, ಋಗ್ವೇದ ಸಂಹಿತೆ ಭಾಗ-3, ಋಗ್ವೇದ ಸಂಹಿತೆ ಭಾಗ-4, ಋಗ್ವೇದ ಸಂಹಿತೆ ಭಾಗ-5, ಋಗ್ವೇದ ಸಂಹಿತೆ ಭಾಗ-6, ಋಗ್ವೇದ ಸಂಹಿತೆ ಭಾಗ-7, ಋಗ್ವೇದ ಸಂಹಿತೆ ಭಾಗ-8, ಋಗ್ವೇದ ಸಂಹಿತೆ ಭಾಗ-9, ಋಗ್ವೇದ ಸಂಹಿತೆ ಭಾಗ-10, ಋಗ್ವೇದ ಸಂಹಿತೆ ಭಾಗ-11, ಋಗ್ವೇದ ಸಂಹಿತೆ ಭಾಗ-12, ಋಗ್ವೇದ ಸಂಹಿತೆ ಭಾಗ-13, ಋಗ್ವೇದ ಸಂಹಿತೆ ಭಾಗ-14, ಋಗ್ವೇದ ...

READ MORE

Related Books