ರಾಮಾಯಣ, ಮಹಾಭಾರತ ಮತ್ತು ಧರ್ಮ

Author : ಚಂದ್ರಕಾಂತ ಪೋಕಳೆ

Pages 120

₹ 120.00




Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, , ಕುಮಾರ ಪಾರ್ಕ್ ಪೂರ್ವ, ಬೆಂಗಳೂರು-560001
Phone: 2216911

Synopsys

ಇದು ಅನುವಾದ ಕೃತಿಯಾಗಿದ್ದು, ಚಂದ್ರಕಾಂತ ಪೋಕಳೆ ಅವರು ಅನುವಾದ ಮಾಡಿದ್ದಾರೆ. ರಾಮಾಯಣ ಮತ್ತು ಮಹಾಭಾರತದ ನಡುವಿನ ಅಂತರ್ ಸಂಬಂಧದ ಬೇರುಗಳನ್ನು ತಡಕಾಡುತ್ತದೆ. ಈ ಕೃತಿಯ ಮೂಲಕ ಸ್ಥಾಪಿತಗೊಂಡ ಧರ್ಮವನ್ನು ಅವರು ವಿಶ್ಲೇಷಿಸುತ್ತಾರೆ. ಮಹಾಭಾರತದ ಕುರಿತಂತೆ ಬರೆಯುತ್ತಾ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ರಾಜಮನೆತನದ ತಲೆಮಾರಿನ ನಿಖರ ಇತಿಹಾಸ ಮತ್ತು ಕೆಲವು ಹಳೆಯ ಚರಿತ್ರೆ ಎಂದು ಅಭಿಪ್ರಾಯ ಪಡುವ ಅವರು, ರಾಮಾಯಣವು ಕೆಲವು ಜಾನಪದ ಕಥೆ ಮತ್ತು ಕೆಲವು ಅದ್ಭುತ ಕತೆಗಳ ಸಮ್ಮಿಶ್ರವಾಗಿದೆ ಎಂದು ಅಭಿಪ್ರಾಯಪಡುತ್ತಾರೆ. ಮಹಾಭಾರತಕ್ಕಿಂತ ಮುನ್ನವೇ ರಾಮಾಯಣ ಜಾನಪದ ರೂಪದಲ್ಲಿ ಜನರ ನಡುವೆ ಅಸ್ತಿತ್ವದಲ್ಲಿದ್ದುದನ್ನೂ ಅವರು ಗುರುತಿಸುತ್ತಾರೆ. ಮಹಾಭಾರತದಲ್ಲಿ ಆರಂಭದಿಂದ ಕೊನೆಯವರೆಗೂ ನಡೆಯುವ ಸಂಘರ್ಷ ಮನುಷ್ಯ ಪಾತಳಿಯದ್ದು ಮತ್ತು ಕೌಟುಂಬಿಕವಾದುದು. ರಾಮಾಯಣ ಕೌಟುಂಬಿಕವಾದರೂ ಅದರಾಚೆಗಿನ ಹಲವು ಪೇಚುಗಳು, ಗೊಂದಲಗಳ ನಡುವೆ ಮುಂದುವರಿಯುತ್ತದೆ. ಮಹಾಭಾರತ ಮತ್ತು ರಾಮಾಯಣ ಹಿಂಸೆಯ ಕುರಿತಂತೆ ತಳೆದಿರುವ ನಿಲುವುಗಳಲ್ಲಿನ ವ್ಯತ್ಯಾಸವನ್ನೂ ಕುತೂಹಲಕರವಾಗಿ ಮಂಡಿಸಲಾಗಿದೆ. ರಾಮಾಯಣದ ಅಯೋಧ್ಯಾಕಾಂಡದಲ್ಲಿ ಕಾಡಿಗೆ ಹೊರಡುವ ರಾಮನ ಚಿತ್ರಗಳು, ಭರತಭಾವಗಳನ್ನು ಕಟ್ಟಿಕೊಡುತ್ತಾ, ಈ ಸಂದರ್ಭದಲ್ಲಿ ದಶರಥ, ಕೌಸಲ್ಯಾ ಮೊದಲಾದ ಪಾತ್ರಗಳ ಅಭಿವ್ಯಕ್ತಿಗಳನ್ನು ಮನಃಶ್ಯಾಸ್ತ್ರೀಯ ನೆಲೆಯಲ್ಲಿ  ಈ ಕೃತಿಯಲ್ಲಿ ವಿಶ್ಲೇಷಿಸಲಾಗಿದೆ.

About the Author

ಚಂದ್ರಕಾಂತ ಪೋಕಳೆ
(20 August 1949)

ಲೇಖಕರು, ಪ್ರಖ್ಯಾತ ಅನುವಾದಕರೂ ಆದ ಚಂದ್ರಕಾಂತ ಪೊಕಳೆ ಅವರು 20-08-1949 ರಂದು ಜನಿಸಿದರು. ಹುಟ್ಟೂರು  ಉತ್ತರ ಕನ್ನಡ ಜಿಲ್ಲೆಯ ಮಂಚಿಕೇರಿ. ತಂದೆ- ಮಹಾಬಲೇಶ್ವರ, ತಾಯಿ- ಪಾರ್ವತಿ. ಹೈಸ್ಕೂಲುವರೆಗೆ ಮಂಚಿಕೇರಿಯಲ್ಲಿ ಓದಿದ ಅವರು, ಧಾರವಾಡದ ಕಾಲೇಜಿನಿಂದ ಬಿ.ಎ ಪದವಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಗಳಿಸಿದ್ದಾರೆ. ಧಾರವಾಡದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಗೌರೀಶ ಕಾಯ್ಕಿಣಿ, ಶಂಬಾ, ಬೇಂದ್ರೆ, ಇವರುಗಳ ಸಾಹಿತ್ಯದಿಂದ ಪ್ರೇರಿತರಾದ ಪೊಕಳೆ, ಅಧ್ಯಾಪಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೇಡಕಿಹಾಳದ ಲಠ್ಠೆ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದ ಅವರು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ...

READ MORE

Related Books