
ಶ್ರೀಮಧುಸೂದನ ಸರಸ್ವತಿ ಮಹಾಸ್ವಾಮಿಗಳು ಸಂಸ್ಕೃತದಲ್ಲಿ ಬರೆದಿರುವ 'ಭಗವದ್ಭಕ್ತಿ ರಸಾಯನಂ' ಎಂಬ ಗ್ರಂಥವನ್ನು ಲೇಖಕ ಎಂ. ಎ. ಹೆಗಡೆ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಭಕ್ತಿರಸವನ್ನು ತಾರ್ಕಿಕವಾಗಿ ನಿರೂಪಿಸುವ ಗ್ರಂಥವಿದು. ಭಕ್ತಿ ಒಂದು ರಸವೆಂದು ಸ್ಥಾಪಿಸಿ ಅದ್ವೈತ ವೇದಾಂತದೊಡನೆ ಸಮನ್ವಯ ಮಾಡಿರುವ ಒಂದು ವಿಶಿಷ್ಟ ಗ್ರಂಥವಿದು. ಈ ಗ್ರಂಥದ ವೈಶಿಷ್ಟ್ಯವಾಗಿದೆ. ಇಲ್ಲಿರುವ ವಿಚಾರಗಳು ಶಾಸ್ತ್ರೀಯವಾದ ವಿಷಯ ನಿರೂಪಣೆಯನ್ನು, ವಿಮರ್ಶೆಯನ್ನು ಮತ್ತು ಪೂರ್ವಪಕ್ಷ ಸಿದ್ಧಾಂತವನ್ನು ಸ್ಥಾಪಿಸುವ ಕ್ರಮದಲ್ಲಿ ಸಾಗುತ್ತದೆ.
©2025 Book Brahma Private Limited.