
ಭಾರತದ ಮಹಾ ಪುರುಷರ ಬಗೆಗಿನ ಫ್ರಾನ್ಸ್ ಜನರ ಆಸಕ್ತಿ ಎಂದಿಗೂ ಇರುವಂತಹುದೇ. ಅಂತಹ ಐದು ಮಹಾಪುರುಷರುಗಳಾದ ರವೀಂದ್ರನಾಥ ಠಾಕೂರ್, ಸ್ವಾಮಿ ವಿವೇಕಾನಂದ, ಲಾಲಾ ಲಜಪತ್ರಾರಯ್, ಮಹಾತ್ಮ ಗಾಂಧಿ ಹಾಗೂ ವಿನೋಬಾ ಬಾವೆ ಇವರನ್ನು ಕುರಿತ ಐದು ಲೇಖನಗಳನ್ನು ಈ ಕೃತಿಯಲ್ಲಿ ನೀಡಲಾಗಿದೆ. ಮೊದಲನೆಯ ಅಧ್ಯಾಯದಲ್ಲಿ ರವೀಂದ್ರನಾಥ ಠಾಕೂರ್ ಹಾಗು ಭಾರತದ ಕುರಿತು ವಿವಿಧ ಲೇಖಕರು ಹೇಳಿರುವುದನ್ನು ನೀಡಲಾಗಿದೆ. ಎರಡನೆಯದರಲ್ಲಿ ಸ್ವಾಮಿ ವಿವೇಕಾನಂದರ ಬಗ್ಗೆ, ಮೂರನೆಯದರಲ್ಲಿ ಲಾಲಾ ಲಜಪತ್ ರಾಯ್ ಅವರ ಕುರಿತು ರೋಲ್ಯಾಂಡ್ರ ಅಭಿಪ್ರಾಯಗಳು, ನಾಲ್ಕನೆಯದರಲ್ಲಿ ಮಹಾತ್ಮ ಗಾಂಧಿಯವರ ವಿಷಯದಲ್ಲಿ ವಿದೇಶೀಯರ ದೃಷ್ಟಿ, ಹಾಗೂ ಐದನೆಯ ಅಧ್ಯಾಯದಲ್ಲಿ ವಿನೋಬಾ ಅವರ ಕುರಿತು ಸ್ಪಷ್ಟವಾದ ವಿವರಗಳು ಈ ಕೃತಿಯಲ್ಲಿ ನೀಡಲಾಗಿದೆ.
©2025 Book Brahma Private Limited.