
ಪಾಲಿ ಭಾಷೆಯಿಂದ ಆಂಗ್ಲ ಭಾಷೆಗೆ ತರ್ಜುಮೆಗೊಂಡ ಕೃತಿಯನ್ನು ಸೋಂದಲಗೆರೆ ಲಕ್ಷ್ಮೀಪತಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಬುದ್ಧನ ಘೋಷಣೆಗಳು (ಧಮ್ಮ ಪದ) ಸರಳವಾಗಿ ಕನ್ನಡಕ್ಕೆ ಅನುವಾದಗೊಂಡಿದ್ದು, ಬುದ್ಧನ ವಿಚಾರಗಳ ಮೂಲಕ ಆತನ ಬದುಕನ್ನು ಕಟ್ಟಿಕೊಡಲಾಗಿದೆ. ಇಲ್ಲಿಯ ವಚನಗಳು ಹಾಗೂ ಅದಕ್ಕೆ ಪೂರಕವಾದ ಕಥೆಗಳು ಚಿಂತನೆಯನ್ನು ಪ್ರೇರೇಪಿಸುತ್ತವೆ. ಬೌದ್ಧ ಧರ್ಮದ ಬಗ್ಗೆ ದೀರ್ಘವಾದ ಪ್ರಸ್ತಾವನೆ, ಬುದ್ಧನ ವಚನಗಳು, ಬುದ್ಧ ಜಾತಕ ಕಥೆಗಳು, ಬುದ್ಧ ಜಾತಕಗಳಿಗೆ ಪೂರಕವಾಗಿ ಬಂದ ಕಥೆಗಳು, ಧಮ್ಮ ಪದ ಸಾಂಗತ್ಯದ ಕಥೆಗಳು ಹೀಗೆ ವಿವಿಧ ಶೀರ್ಷಿಕೆಗಳಡಿ ಬುದ್ಧಜ ಜೀವನವನ್ನು ಸಮಗ್ರವಾಗಿ ಚರ್ಚಿಸಿ, ಪರಾಮರ್ಶಿಸಿ, ಅದರ ಅನನ್ಯತೆಯ ಬಗ್ಯಗೆ ಓದುಗರ ಗಮನ ಸೆಳೆಯಲಾಗಿದೆ.
©2025 Book Brahma Private Limited.