
'ಕಾಸ್ಮಿಕ್ ಡಿಟೆಕ್ಟಿವ್' ಕೆ.ಪುಟ್ಟಸ್ವಾಮಿ ಅವರು ಅನುವಾದಿಸಿರುವ ಕೃತಿ. ಮೂಲ ಲೇಖಕರು ಡಾ. ಮಣಿ ಭೌಮಿಕ್. ಅವರ ಕೃತಿಯನ್ನು ಅಷ್ಟೇ ಸೂಕ್ಷವಾಗಿ ಪುಟ್ಟಸ್ವಾಮಿಯವರು ಕನ್ನಡೀಕರಿಸಿದ್ದಾರೆ. ಡಾ.ಭೌಮಿಕ್ ಅವರು ವಿಷಯದ ಆಳಕ್ಕೆ ಇಳಿದು ಅಪರೂಪದ ಹುಮ್ಮಸ್ಸಿನಿಂದ ನಿರೂಪಿಸಿದ್ದಾರೆ. ವೈಜ್ಞಾನಿಕವಾಗಿ ಕರಾರುವಾಕ್ಕಾದ ಹಾಗೂ ಜನಸಾಮಾನ್ಯರಿಗೂ ಅರ್ಥವಾಗುವ ಭಾಷೆಯಲ್ಲಿ ಕೃತಿಯನ್ನು ಬರೆಯುವುದು ಸುಲಭದ ಕಾರ್ಯವಲ್ಲ. ಕಾಸ್ಟಿಕ್ ಡಿಟೆಕ್ಟಿವ್ ಅಂಥ ಸಂಯೋಜನೆಯನ್ನು ಸಾಧ್ಯವಾಗಿಸಿದೆ.
ಡಾ. ಕ್ಯಾಥರಿನ್ ಸೀಸಾರ್ಸಿ ಅಧ್ಯಕ್ಷರು, ಅಂತಾರಾಷ್ಟ್ರೀಯ ಖಗೋಳ ವಿಜ್ಞಾನ ಒಕ್ಕೂಟ ತಮ್ಮ ಹೊಸ ಪುಸ್ತಕದಲ್ಲಿ ಮಣಿಭೌಮಿಕ್ ಅವರು ವಿಶ್ವದ ಮನೋಹರ ಭೂಮಿಕೆಯನ್ನು ಹೊಸ ಚಿತ್ರಗಳು, ವ್ಯಾಪಕ ಒಳನೋಟಗಳ ಮೂಲಕ ವಿವರಿಸಿದ್ಕದಾರೆ. ವಿಶ್ವದ ಹೊಸ ರೂಪದಲ್ಲಿ ಅಡಗಿರುವ ಸೌಂದರ್ಯ, ಸಂಕೀರ್ಣತೆ ಮತ್ತು ಅದರ ಸಂದೇಶವನ್ನು ಅರಿಯಲು ಪ್ರೇರೇಪಿಸುತ್ತಾರೆ.
©2025 Book Brahma Private Limited.