
ಇಟಾಲಿಯನ್ ಮಹಾಕವಿ ಡಾಂಟೆ ಅಲಿಘೆಯೇರಿ ಅವರ ಡಿವೈನ್ ಕಾಮಿಡಿ ಕೃತಿಯನ್ನು ಅದೇ ಶೀರ್ಷಿಕೆಯಡಿ ಲೇಖಕ ಕೆ.ಎಂ. ಸೀತಾರಾಮಯ್ಯ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಶೀರ್ಷಿಕೆಯ ಕೃತಿಯು ಸರಣಿ ರೂಪದಲ್ಲಿ ಪ್ರಕಟವಾಗಿದೆ. ವಿಶ್ವ ರಚನಾಕ್ರಮದಲ್ಲಿ ತನ್ನ ಕಾಲದ ಅನೇಕರಂತೆ ಟಾಲೆಮಿಯ ಸಿದ್ದಾಂತವನ್ನು ಒಪ್ಪಿಕೊಂಡವನು. ಅದರಂತೆ ಭೂಮಿಯೇ ವಿಶ್ವದ ಕೇಂದ್ರ ಅದರ ಸುತ್ತ ಅದನ್ನು ಒಳಗೊಂಡಂತೆ ಏಕಕೇಂದ್ರಿತವಾದ ಒಂಬತ್ತು ಗೋಳಗಳು ತಿರುಗುತ್ತಿವೆ. ಭೂಲೋಕದಿಂದ ಮೇಲೇರಿದಂತೆ ಕ್ರಮವಾಗಿ ಚಂದ್ರಲೋಕ, ಬುಧಲೋಕ, ಶುಕ್ರಲೋಕ, ಸೂರ್ಯಲೋಕ, ಮಂಗಳಲೋಕ, ಗುರುಲೋಕ, ಶನಿಲೋಕ ಆಮೇಲೆ ತಾರಾಲೋಕ ಅದರ ಮೇಲೆ ಒಂಬತ್ತೆಯದಾಗಿ ಸ್ಫಟಿಕ ಲೋಕ ಇವೆ. ಇವುಗಳ ಹಿನ್ನೆಲೆಯಲ್ಲಿ ವಿಶ್ಲೇಷಣೆಗಳನ್ನು ನೀಡುತ್ತಾ ವೈಜ್ಞಾನಿಕ ಸಿದ್ದಾಂತಗಳ ಅರಿವು ಮೂಡಿಸುವ ಕೃತಿ ’ಡಿವೈನ್ ಕಾಮಿಡಿ’.
©2025 Book Brahma Private Limited.