
ಡಾ. ಸ್ವೆತಾಸ್ಲೋವ್ ರೋರಿಕ್ ಅವರ ಹ್ಯೂಮ್ಯಾನಿಸಂ ಇನ್ ಆರ್ಟ್ ಕೃತಿಯ ಕನ್ನಡ ರೂಪಾಂತರ ‘ಕಲೆಯಲ್ಲಿ ಮಾನವತಾವಾದ’. ಡಾ. ಎಚ್.ಎಸ್. ರಾಘವೇಂದ್ರ ರಾವ್ ಅವರು ಕನ್ನಡೀಕರಿಸಿದ್ದಾರೆ. ಈ ಪುಸ್ತಕದ ವಸ್ತುವಾಗಿರುವ ಮಾನವತಾವಾದವು, ಮೂಲಭೂತವಾಗಿ ಬಹಳ ವಿಶಾಲವಾದ, ಮನಸೆಳೆಯುವ ವಿಷಯ. ಆದರ ಕೆಲವೇ ಪದಗಳಲ್ಲಿ ಸೂತ್ರರೂಪದಲ್ಲಿ ನಿರ್ವಚಿಸಲು ಸಾಧ್ಯ. ಯಾವುದೇ ಮಾನವೀಯ ಅಭಿವ್ಯಕ್ತಿಯ ಕೇಂದ್ರದಲ್ಲಿ ಮನುಷ್ಯನ ಪ್ರತಿಷ್ಠಾಪನೆಯಾದಾಗ ಮಾನವತಾದವು ಉದಯವಾಗುತ್ತದೆ ಅಥವಾ ಇಡೀ ವಿಶ್ವ ಮತ್ತು ಮನುಷ್ಯನ ಉನ್ನತ ಭಾವನೆಗಳ ಸಮಗ್ರ ವರ್ಣಪಟಲವು ಆಧ್ಯಾತ್ಮಿಕ ಪ್ರಚೋದನೆಗಳಿಗೆ ಅನುಗುಣವಾಗಿ ಮಿಡಿಯತೊಡಗುತ್ತದೆ. ಕಲಾವಿದನ ಎಲ್ಲ ಅಭೀಪ್ಸೆಗಳೂ ಆ ಕಡೆಗೆ ಕೇಂದ್ರೀಕೃತವಾಗುತ್ತವೆ. ಆಗ ಮನುಷ್ಯನೇ ಕಲಾವಿದನ ಮೂಲಭೂತ ಕಾಳಜಿಯಾಗಿ ಬಿಡುತ್ತಾನೆ. ಈ ಎಲ್ಲ ಸೂಕ್ಷ್ಮಾತಿಸೂಕ್ಷ್ಮ ವಿಚಾರಗಳನ್ನು ಈ ಕೃತಿ ಓದುಗರ ಮುಂದಿಡುತ್ತದೆ.
©2025 Book Brahma Private Limited.