
ಇಂಗ್ಲಿಷ್ ಮೂಲದ ಕೃತಿಯನ್ನು ಎಸ್. ಆರ್. ಭಟ್ ಕನ್ನಡಕ್ಕೆ ತಂದಿದ್ದಾರೆ. ಪುಸ್ತಕವು ಎರಡು ಮುಖ್ಯ ಕಾರಣಗಳಿಂದ ಗಮನ ಸೆಳೆಯುತ್ತದೆ. ಮೊದಲನೆಯ ಲೇಖನವು ಮಾರ್ಕ್ಸ್ವಾದೀ ವಿಮರ್ಶೆಗೆ ಒಂದು ಉತ್ತಮ ನಿದರ್ಶನ. ಎರಡನೆಯ ಲೇಖನವು ನಮ್ಮ ರಾಷ್ಟ್ರೀಯ ಚಳವಳಿಯಲ್ಲಿ ಭಗವದ್ಗೀತೆಯನ್ನು ಬಳಸಿಕೊಂಡ ಕ್ರಮವನ್ನು ವಿಶ್ಲೇಷಿಸುತ್ತದೆ. ಮೂರನೆಯ ಲೇಖನವು ಹಿಂದೂ ಧರ್ಮದ ವೈಶಿಷ್ಟ್ಯಗಳನ್ನು ಪರಿಶೀಲಿಸುತ್ತದೆ. ಅಂದರೆ, ಕೃತಿಯಲ್ಲಿ ಮಾರ್ಕ್ಸ್ವಾದಿ ವಿಮರ್ಶೆಯ ಕೆಲ ಲಕ್ಷಣಗಳನ್ನೂ ಭಗವದ್ಗೀತೆಯನ್ನು ಕುರಿತಂತೆ ಹೊಸ ವ್ಯಾಖ್ಯಾನಗಳನ್ನೂ ನಾವು ಗಮನಿಸಬಹುದು.
©2025 Book Brahma Private Limited.