
ವಿವಕ್ಷಾ ಲಲಿತಾ ಕೆ.ಪಿ ಅವರ ಸಂಶೋಧನೆಗಳ ಕುರಿತ ಲೇಖನಗಳ ಸಂಗ್ರಹವಾಗಿದೆ. ಕಳೆದ ಒಂದು ದಶಕದಿಂದ ಗಂಭೀರವಾದ ಸಂಶೋಧನೆಯನ್ನು ಕೈಗೊಂಡ ಡಾ.ಲಲಿತ.ಕೆ.ಪಿ ಅವರು ತಮ್ಮ ಡಾಕ್ಟರೇಟ್ ಪದವಿ ಪಡೆಯುವ ಮೊದಲು ಪ್ರಕಟಿಸಿದ ಪ್ರಬಂಧಗಳ ಸಂಕಲನ ' ವಿವಕ್ಷಾ ' ಕೊಡಗಿನ ಮೂಲೆ ಮೂಲೆಗಳಲ್ಲಿ ಓಡಾಡಿ ಸಂಗ್ರಹಿಸಿದ ಮೌಖಿಕ ಆಕರಗಳನ್ನು ಪ್ರಕಟಗೊಂಡ ಸಂಶೋಧನಾ ಕೃತಿಗಳ ಹಾಗೂ ಪ್ರಚಲಿತದಲ್ಲಿರುವ ಸೈದ್ಧಾಂತಿಕ ಪರಿಪೇಕ್ಷ್ಯಗಳ ಜೋತೆಗೆ ತುಲನೆಮಾಡಿ ಕೋಡಗಿನ ಸಾಹಿತ್ಯ, ಜನಪದ, ಚರಿತ್ರೆ, ಭಾಷಾ ವಿಜ್ಞಾನಕ್ಕೆಸಂಬಂಧಿಸಿದಂತಹ ಉತ್ಕೃಷ್ಟ ಮಾಹಿತಿಗಳನ್ನು ಡಾ.ಲಲಿತ ಅವರು ಸೈದ್ಧಿಂತೀಕರಿಸಿದ್ದಾರೆ. ಭಾಷೆ ಹಾಗೂ ಸಮಾಜವಿಜ್ಞಾನಗಳ ಅಧ್ಯಯನಗಳಲ್ಲಿ ತೋಡಗಿಸಿಕೊಂಡ ಸಂಶೋಧಕರಿಗೆ ಈ ಕೃತಿ ಭಿನ್ನವಾದ ಒಳನೋಟಗಳನ್ನುನೀಡುವುದರಲ್ಲಿ ಯಾವುದೇ ಸಂಶಯವಿಲ್ಲ.
©2025 Book Brahma Private Limited.