ಹಿಂದೂ ರೀತಿ ನೀತಿಗಳು ಪದ್ದತಿಗಳು ಮತ್ತು ಆಚರಣೆ

Author : ಸು. ರುದ್ರಮೂರ್ತಿ ಶಾಸ್ತ್ರಿ

Pages 145

₹ 196.00




Year of Publication: 2012
Published by: ಐಬಿ ಹೆಚ್‌ ಪ್ರಕಾಶನ
Address: #77, 2ನೇ ಮುಖ್ಯರಸ್ತೆ, ರಾಮರಾವ್ ಲೇಔಟ್, ಬಿಎಸ್ ಕೆ ಮೂರನೇ ಸ್ವೇಜ್, ಬೆಂಗಳೂರು- 560085.
Phone: 080- 48371555

Synopsys

ಹಿಂದೂ ರೀತಿ ನೀತಿಗಳು ಪದ್ದತಿಗಳು ಮತ್ತು ಆಚರಣೆ ಕೃತಿಯ ಮೂಲ ಇಂಗ್ಲೀಷ್‌ ಆಗಿದೆ. ಈ ಕೃತಿಯನ್ನು ರುದ್ರಮೂರ್ತಿ ಶಾಸ್ತ್ರಿ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಪಾಚೀನ ಕಾಲದಲ್ಲಿ ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಪೂಜಾಕಾರ್ಯವನ್ನು ನೆರವೇರಿಸಿ ಅಥವಾ ದೇವಾಲಯಗಳಿಗೆ ಹೋಗಿ ಪೂಜೆ ಸಲ್ಲಿಸಿ ತಮ್ಮ ದಿನನಿತ್ಯದ ಕಾರ್ಯಗಳನ್ನು ಆರಂಭಿಸುತ್ತಿದ್ದರು. ಈಗಿನ ಕಾಲದಲ್ಲಿ ಮನುಷ್ಯ ಭೌತಿಕ ಪ್ರಪಂಚದಲ್ಲಿ ಮುಳುಗಿಹೋಗಿರುವುದರಿಂದ ಆ ವ್ಯವಧಾನವಿಲ್ಲ. ಈಗಅವನು ಮನೆಯಲ್ಲೇ ಶಾಸ್ತ್ರ ಗ್ರಂಥಗಳ ಅಧ್ಯಯನ ಮತ್ತು ಪೂಜೆ ಸಲ್ಲಿಸಬಹುದು. ಸಮಯ ಸಿಕ್ಕಾಗ ದೇವಾಲಯಗಳಿಗೆ ಭೇಟಿ ಕೊಡಬಹುದು ಮತ್ತು ಧಾರ್ಮಿಕ ಪ್ರಚವನಗಳನ್ನು ಕೇಳಬಹುದು. ಈ ಪುಸ್ತಕದಲ್ಲಿ ಕೊಟ್ಟಿರುವ ಪದ್ಧತಿಗಳು ಮತ್ತು ಆಚರಣೆಗಳ ವಿವರಣೆ ಸಂಕ್ಷಿಪ್ತವಾಗಿದೆಯೇ ಹೊರತು ವಿಸ್ತ್ರತವಾಗಿಲ್ಲ. ಪ್ರತಿಯೊಂದನ್ನೂ ವಿವರವಾಗಿ ಚಿತ್ರಿಸಲು ಹೋದರೆ ಅದು ಆನೇಕ ಸಂಪುಟಗಳಾಗಬಹುದು. ಆದರೂ ಇಲ್ಲಿರುವ ವಿವರಗಳು ಓದುಗರಿಗೆ ಉಪಯುಕ್ತವಾಗಿದ್ದು ಅವನ ಜ್ಞಾನವಿಕಾಸಕ್ಕೆ ಸಹಾಯವಾಗಿದೆ ಎಂದು ಪುಸ್ತಕದ ಹಿನ್ನುಡಿಯಲ್ಲಿ ತಿಳಿಸಲಾಗಿದೆ.

About the Author

ಸು. ರುದ್ರಮೂರ್ತಿ ಶಾಸ್ತ್ರಿ
(11 November 1948)

ಲೇಖಕ ರುದ್ರಮೂರ್ತಿ ಶಾಸ್ತ್ರಿ ಅವರು ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸುಗ್ಗನಹಳ್ಳಿಯವರು. ತಂದೆ-ಎಸ್.ಎನ್. ಶಿವರುದ್ರಯ್ಯ, ತಾಯಿ- ಸಿದ್ಧಗಂಗಮ್ಮ. ಪ್ರಾರಂಭಿಕ ಶಿಕ್ಷಣ ಹುಟ್ಟೂರಿನಲ್ಲಿ , ಪ್ರೌಢಶಾಲೆಯನ್ನು ರಾಮನಗರದಲ್ಲಿ ಪೂರ್ಣಗೊಳಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವೀಧರರು. ಬೆಂಗಳೂರಿನ ರೇಣುಕಾಚಾರ್ಯ ಸಂಜೆ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದರು. ನಂತರ ವೃತ್ತಿಗೆ ರಾಜೀನಾಮೆ ನೀಡಿ ಸಾಹಿತ್ಯ ಸೇವೆಯಲ್ಲಿ ತೋಡಗಿ, ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ‘ಭಾವ ಲಹರಿ’, ಪರಿ, ಅಂತರಂಗ-ಬಹಿರಂಗ, ಚಿತ್ರಕಲ್ಪನೆ, ರಾಗ, ನಾಡಗೀತೆಗಳು, ನಾದರೂಪಕ ಕವನ ಸಂಕಲನಗಳು. ಪ್ರಾಸ-ಪ್ರಯಾಸ, ಕೆಂಪಭಾರತಂ, ಕೆಂಪರಾಮಾಯಣಂ, ಕೆಂಪನ ವಚನಗಳು, ಅಲ್ಪಜ್ಞನ ವಚನಗಳು ಮುಂತಾದ ಹಾಸ್ಯ ಸಂಕಲನಗಳು ಸೇರಿ ಸುಮಾರು ...

READ MORE

Related Books