
ಭಗವದ್ಗೀತೆಯನ್ನೂ ಬುದ್ಧನ ಆಲೋಚನೆಗಳನ್ನೂ ಮುಖಾಮುಖಿಯಾಗಿಸುವ ಯತ್ನವನ್ನು ಬಿ. ಆರ್. ಅಂಬೇಡ್ಕರ್ ತಮ್ಮ ಜೀವಿತಾವಧಿಯಲ್ಲಿ ಆಗಾಗ ಮಾಡಿದರು. ಆ ಮೂಲಕ ಸಮಾಜ ಸುಧಾರಣೆ ಮಾಡುವುದು ಅವರ ಕನಸಾಗಿತ್ತು. ಭಗವದ್ಗೀತೆ ಏನು ಹೇಳುತ್ತದೆ, ಬುದ್ಧನ ವಿಚಾರಗಳು ಏನು ಹೇಳುತ್ತವೆ? ಯಾವುದು ಜೀವಪರ ಯಾವುದು ಅಲ್ಲ, ಯಾವುದು ಸಮಾನತೆಗೆ ಪೂರಕ ಎಂಬ ವಿಚಾರಗಳನ್ನು ಕೃತಿ ಚರ್ಚಿಸುತ್ತದೆ.
ಅಂಬೇಡ್ಕರ್ ಕೃತಿಯಲ್ಲಿ ಆಡಿರುವ ಮಾತುಗಳು ಹೀಗಿವೆ: ಭಗವದ್ಗೀತೆ ಬೋಧಿಸುವ ಸಂದೇಶ ಏನು ಎಂಬುವರ ಬಗ್ಗೆ ಇಂತಹ ವೈವಿಧ್ಯಮಯವಾದ ಅಭಿಪ್ರಾಯ ಕಾಣುವುದು ದೊಡ್ಡ ಆಶ್ಚರ್ಯದ ಸಂಗತಿಯಲ್ಲ. ವಿದ್ವಾಂಸರು ದಾರಿ ತಪ್ಪಿದ್ದಾರೆಂಬುದೇ ಇದಕ್ಕೆ ನನ್ನ ಉತ್ತರ. ಖುರಾನ್, ಬೈಬಲ್ ಅಥವಾ ಧಮ್ಮ ಪದದ ಹಾಗೆ ಭಗವದ್ಗೀತೆಯೂ ಕೂಡ ಒಂದು ಸಂದೇಶವನ್ನು ಕೊಡುತ್ತದೆ ಎಂಬ ಭಾವನೆಯಿಂದ ಅವರು ಹೊರಟಿದ್ದಾರೆ. ನನ್ನ ಅಭಿಪ್ರಾಯದಲ್ಲಿ ಈ ಭಾವನೆ ಸಂಪೂರ್ಣವಾಗಿ ತಪ್ಪು ಭಾವನೆಯಾಗಿದೆ. ಭಗವದ್ಗೀತೆಯು ದೇವವಾಣಿಯಲ್ಲ. ಆದ್ದರಿಂದ ಅದು ಯಾವ ಸಂದೇಶವನ್ನೂ ಕೊಡಲಾರದು. ಅದನ್ನು ಹುಡುಕುವುದು ವ್ಯರ್ಥ.
©2025 Book Brahma Private Limited.