
‘ದಲಿತ ಸಾಹಿತ್ಯದ ಸೌಂದರ್ಯ ಪ್ರಜ್ಞೆ’ ಮರಾಠಿ ಲೇಖಕ ಶರಣಕುಮಾರ ಲಿಂಬಾವಳಿ ಅವರ ಕೃತಿಯ ಕನ್ನಡಾನುವಾದ. ಮಾಡಿದವರು ವಿಠಲರಾವ್ ಟಿ. ಗಾಯಕ್ವಾಡ್.
ಇದು ದಲಿತ ಸಾಹಿತ್ಯದ ವಿಮರ್ಶೆ ಎನ್ನಬಹುದು. ದಲಿತ ಲೇಖಕರು ಪಾರಂಪರಿಕ ಸೌಂದರ್ಯ ಶಾಸ್ತ್ರವನ್ನು ನಿರಾಕರಿಸುತ್ತಾರೆ. ಆದರೆ, ತಮ್ಮ ಸಾಹಿತ್ಯಕ್ಕಾಗಿ ಬೇರೆಯದ್ದೇ ಆದ ಸೌಂದರ್ಯಶಾಸ್ತ್ರವಿರಬೇಕು ಎಂಬ ಆವಶ್ಯಕತೆಯನ್ನು ಮಾನ್ಯ ಮಾಡಿದ್ದಾರೆ. ದಲಿತ ಲೇಖಕರಿಗೆ ತಮ್ಮ ಸಾಹಿತ್ಯದ ಸೌಂದರ್ಯ ಮೀಮಾಂಸೆಗಾಗಿ ಬೇರೆಯದ್ದೇ ನಿಕಷಗಳ ಆವಶ್ಯಕತೆಯು ಇದೆ ಎಂಬುದಾಗಿ ದಲಿತ ಲೇಖಕ-ವಿಮರ್ಶಕರ ಪ್ರತಿಪಾದನೆಯಾಗಿದೆ. ಅರ್ಥಾತ್ ನಿಕಷಗಳು ಬದಲಾವಣೆಯಾದಲ್ಲಿ ಸೌಂದರ್ಯವೂ ಬದಲಾವಣೆಯಾಗುತ್ತದೆ. ಜೀವನವಾದಿ, ವಾಸ್ತವವಾದಿ ವಿಮರ್ಶೆಗಳ ನಿಕಷಗಳ ಅನುಸಾರ ದಲಿತ ಸಾಹಿತ್ಯದ ಸೌಂದರ್ಯ ಮೀಮಾಂಸೆಯನ್ನು ಮಾಡಬೇಕಾಗುತ್ತದೆ ಎಂಬ ಧೋರಣೆಯು ಇರುವುದು.
ಲೇಖಕನಿಗೆ ಹೇಗೆ ಹೀಗೆ ಬರೆಯಬೇಕು, ಹಾಗೆ ಬರೆಯಬೇಕು' ಎಂಬುದು ಅಮಾನ್ಯವಾಗಿರುವುದೋ, ಹಾಗೆಯೇ, ವಿಮರ್ಶಕರಿಗೂ 'ಹೀಗೆ ವಿಮರ್ಶೆ ಮಾಡಬೇಕು, ಹಾಗೆ ವಿಮರ್ಶೆ ಮಾಡಬೇಕು' ಎಂಬುದಾಗಿ ಹೇಳುವುದು ಕೂಡಾ ತಪ್ಪಾಗುತ್ತದೆ. ಕಲಾಕೃತಿಯು ಒಂದೇ ಆಗಿರುತ್ತದೆ, ಆದರೆ ಅದರ ಮೇಲಿನ ವಿಮರ್ಶೆಗಳು ಮಾತ್ರ ಬೇರೆ ಬೇರೆ ಸ್ವರೂಪದ್ದಾಗಿರುತ್ತವೆ ಎಂಬುದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಹಾಗಾಗಿ. ಈ ಕೃತಿ ದಲಿತ ಸಾಹಿತ್ಯದಲ್ಲಿ ಸೌಂದರ್ಯ ಪ್ರಜ್ಞೆಯ ಕುರಿತ ವಿಮರ್ಶೆಯಾಗಿದೆ.
©2025 Book Brahma Private Limited.