ಬಿ. ಪುರಂದರ ಭಟ್‌

Author : ಪರೀಕ್ಷಿತ್ ತೋಳ್ಪಾಡಿ

Pages 56

₹ 45.00




Year of Publication: 2018
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಕಾಂತಾವರ ಕನ್ನಡ ಸಂಘದ 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 240ನೇ ಕೃತಿಯಿದು. ಅದಮೃ ಕ್ರಿಯಾಶೀಲತೆಯ ಪ್ರತೀಕ ಬಿ. ಪುರಂದರ ಭಟ್ ಪುತ್ತೂರಿನ ಸಾಂಸ್ಕೃತಿಕ, ಸಾಮಾಜಿಕ ಇತಿಹಾಸದಲ್ಲಿ ಅಚ್ಚಳಿಯದ ಮುದ್ರೆಯನ್ನೊತ್ತಿದವರು. ಶಿವರಾಮ ಕಾರಂತರು, ಮೊಳಹಳ್ಳಿ ಶಿವರಾಯರ ನಂತರದ ಸಾಲಿನಲ್ಲಿ ಸೇರುವ, ಸೇರಬೇಕಾದ ಹೆಸರು ಪುತ್ತೂರು ಕರ್ನಾಟಕ ಸಂಘದ ಅಧ್ಯಕ್ಷರಾದ ಬಿ. ಪುರಂದರ ಭಟ್ಟರದು. ಪುತ್ತೂರಿನ ಜನರ ಸಾಂಸ್ಕೃತಿಕ ಸಂವೇದನೆಗೆ ಸಾಕ್ಷಿಯಂತೆ ನಿಂತವರು ಪುರಂದರ ಭಟ್ಟರು. ವಕೀಲ, ಅಧ್ಯಾಪಕ, ಟ್ರೇಡ್ ಯೂನಿಯನ್ ನೇತಾರ ಇವೆಲ್ಲ ಪುರಂದರ ಭಟ್ಟರ ಸಾಮಾಜಿಕ ವ್ಯಕ್ತಿತ್ವವಾದರೆ, ಕವಿ, ಲೇಖಕ, ಚಿಂತಕ, ಕಲಾಪೋಷಕ, ಸಂಘಟಕ ಇತ್ಯಾದಿಗಳು ಅವರ ವ್ಯಕ್ತಿತ್ವದ ಇನ್ನೊಂದು ಆಪ್ತ ಮುಖ. ಅವರು ನಡೆಸುತ್ತಿದ್ದ ಸಾಹಿತ್ಯ ಕಲಾ ಕುಶಲೋಪರಿ, ಲಕ್ಷ್ಮೀಶ ತೋಳ್ಳಾಡಿಯವರ ಪ್ರವಚನ ಮಾಲಿಕೆ, ಕರ್ನಾಟಕ ಸಂಘದ ಹಲವಾರು ಅಮೂಲ್ಯ ಪ್ರಕಟಣೆಗಳು - ಇವೆಲ್ಲ ಪುರಂದರ ಭಟ್ಟರ ಕೊಡುಗೆಯನ್ನು ಬಹುಕಾಲ ನೆನಪಿನಲ್ಲುಳಿಯುವಂತೆ ಮಾಡುತ್ತವೆ. ಪುರಂದರ ಭಟ್‌ ಅವರ ಸಾಧನೆಯನ್ನು ಈ ಕೃತಿ ನೀಡುತ್ತದೆ.

About the Author

ಪರೀಕ್ಷಿತ್ ತೋಳ್ಪಾಡಿ

ಪರೀಕ್ಷಿತ ತೋಳ್ಪಾಡಿ ಅವರು ಪುತ್ತೂರಿನ ಅಂಬಿಕಾ ವಿದ್ಯಾಲಯದಲ್ಲಿ ಸಂಸ್ಕೃತ ಉಪನ್ಯಾಸಕರು. ತಮ್ಮ ತಂದೆ ಖ್ಯಾತ ಚಿಂತಕ ಲಕ್ಷ್ಮೀಶ ತೋಳ್ಪಾಡಿಯವರಂತೆ ಸಂಸ್ಕೃತ ಕನ್ನಡ-ಇಂಗ್ಲಿಷ್ ಸಾಹಿತ್ಯಗಳಲ್ಲಿ ವಿಹರಿಸಿರುವ ಪರೀಕ್ಷಿತ ತೋಳ್ಪಾಡಿಯವರು ಖ್ಯಾತ ಸಂಸ್ಕೃತ ವಿದ್ವಾಂಸ ಪಾದೆಕಲ್ಲು ನರಸಿಂಹ ಭಟ್ಟರಲ್ಲಿ ವಿಶೇಷಾಧ್ಯಯನ ನಡೆಸಿದ್ದಾರೆ. ಪರೀಕ್ಷಿತರಿಗೆ ಕೃಷಿಯಲ್ಲಿ ವಿಶೇಷಾಸಕ್ತಿ, ಶಾಂತಿಗೋಡಿನ ಕೃಷಿಭೂಮಿಯಲ್ಲಿ ಕಾಡಿನೊಂದಿಗೆ ಕೃಷಿ ಚಟುವಟಿಕೆ ಗಳನ್ನು ನಡೆಸುತ್ತಿರುವ ಅವರು ಸುಭಾಷ್ ಪಾಲೇಕರ್ ಅವರ ಕೃಷಿ ಪದ್ಧತಿಯ ಕುರಿತು ಒಂದು ಪರಿಚಯ ಪುಸ್ತಕ ಬರೆದಿದ್ದಾರೆ. ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳಲ್ಲಿ – ವಿಶೇಷಾಂಕಗಳಲ್ಲಿ ಹಲವು ಕವಿತೆ - ಲೇಖನಗಳು ಅಚ್ಚಾಗಿವೆ. ...

READ MORE

Related Books