
ಸಮಾಜಕ್ಕಾಗಿ ಬದುಕಿದ ವೈದ್ಯೆ ಸಾಹಿತಿ ಡಾ. ಸಬಿತಾ ಮರಕಿಣಿ ಅವರ ಕುರಿತ ಈ ಪುಸ್ತಕವು ಕಾಂತಾವರ ಕನ್ನಡ ಸಂಘವು ಪ್ರಕಟಿಸುತ್ತಿರುವ ನಾಡಿಗೆ ನಮಸ್ಕಾರ ಸರಣಿಯ 193ನೆಯದ್ದಾಗಿದೆ. ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲ್ಲೂಕಿನ ಕುಂಬ್ಳೆ ಸಮೀಪದ ನಾರಾಯಣಮಂಗಲದ ಹಿಳ್ಳೆಮನೆಯವರಾದ ಸಬಿತಾ ಅವರು ಪಂಡಿತ್ ತಾರಾನಾಥ ಅವರ ’ಪ್ರೇಮಾಯತನ’ ಆಶ್ರಮದಲ್ಲಿದ್ದವರು. ತಾರಾನಾಥರ ಸಮ್ಮುಖದಲ್ಲಿಯೇ ಅವರು ಡಾ. ಎಂ.ಬಿ. ಮರಕಿಣಿ ಅವರ ಜೊತೆ ಮದುವೆಯಾದರು. ವೈದ್ಯಕೀಯ ವೃತ್ತಿಯ ಜೊತೆಗೆ ಕವಿತೆ ಬರೆಯವುದರಲ್ಲಿಯೂ ಅವರಿಗೆ ಆಸಕ್ತಿ. ಸಬಿತಾ ಅವರ ಬದುಕು-ಸಾಧನೆಯನ್ನು ಈ ಕೃತಿ ಕಟ್ಟಿಕೊಡುತ್ತದೆ.
©2025 Book Brahma Private Limited.