ಕಂದಾವರ ರಘುರಾಮ ಶೆಟ್ಟಿ

Author : ಎಸ್. ವಿ. ಉದಯ ಕುಮಾರ ಶೆಟ್ಟಿ

Pages 56

₹ 45.00




Year of Publication: 2017
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಕಾಂತಾವರ ಕನ್ನಡ ಸಂಘ ಕಾಂತಾವರದ 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 210ನೇ ಪುಸ್ತಕ ಕಂದಾವರ ರಘುರಾಮ ಶೆಟ್ಟಿ. ಯಕ್ಷಗಾನದ ಪ್ರಸಂಗಕರ್ತ, ರಂಗಕರ್ಮಿ, ಕಲಾವಿದ ಕಂದಾವರ ರಘುರಾಮ ಶೆಟ್ಟರು ಛಂದೋಬದ್ಧವಾಗಿ ಪೌರಾಣಿಕ ಆಕರ ಗಳನ್ನೇ ಬಳಸಿಕೊಂಡು ಸುಮಾರು 33 ಪ್ರಸಂಗ ರಚಿಸಿದ ಅಪೂರ್ವ ಸಾಹಿತಿ, ಪೆರ್ಡೂರು ಮೇಳಕ್ಕೆ ಇವರು ನೀಡಿದ 'ಶೂದ್ರ ತಪಸ್ವಿನಿ' ದಾಖಲೆ ನಿರ್ಮಿಸಿದೆ. ಸಾಲಿಗ್ರಾಮ ಮೇಳದಲ್ಲಿ 'ಸತೀ ಸೀಮಂತಿನಿ', 'ಚಲುವೆ ಚಿತ್ರಾವತಿ', 'ರತಿರೇಖಾ', 'ವಸುವರಾಂಗಿ', ಮೂಲ್ಕಿ ಮೇಳದಲ್ಲಿ 'ಸೀತಾಪಾರಮ್ಯ' ಜಯಬೇರಿ ಪಡೆದಿವೆ. ಕಡತೋಕ ಮಂಜುನಾಥ ಭಾಗವತರು, ಗಾನಕೋಗಿಲೆ ಕಾಳಿಂಗ ನಾವಡರು, ಸುಬ್ರಮಣ್ಯ ಧಾರೇಶ್ವರರು ಮೆಚ್ಚುಗೆಯ ಮಾತನಾಡಿದ್ದು ಈ ಯಕ್ಷಕವಿಗೆ ಸಂದ ಬಹುದೊಡ್ಡ ಗೌರವ. ಅವರ ಜೀವನ-ಸಾಧನೆಯನ್ನು ಈ ಕೃತಿ ನೀಡುತ್ತದೆ.

About the Author

ಎಸ್. ವಿ. ಉದಯ ಕುಮಾರ ಶೆಟ್ಟಿ

ಪ್ರೊ. ಎಸ್.ವಿ. ಉದಯಕುಮಾರ ಶೆಟ್ಟಿ ಅವರು ಮಣಿಪಾಲದ ಎಂ.ಐ.ಟಿ ತಾಂತ್ರಿಕ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಯಕ್ಷಗಾನ ಭಾಗವತರು, ವೇಷಧಾರಿ, ಚೆಂಡೆವಾದಕರು, ಯಕ್ಷಗಾನ ಲೇಖಕರು, ಚಿಂತಕರು ಮತ್ತು ವಿಮರ್ಶಕರು ಆಗಿದ್ದಾರೆ. ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಎಂ.ಟೆಕ್. ಪದವಿ ಪಡೆದ ಇವರು ಯಕ್ಷಗಾನ ಕ್ಷೇತ್ರದಲ್ಲಿ ಕೃಷಿ ಮಾಡಿದ್ದು ವಿಶೇಷ. ಬಡಗು ತಿಟ್ಟಿನ ಹವ್ಯಾಸಿ ಯಕ್ಷಗಾನ ರಂಗಭೂಮಿಯ 'ದಶಾವತಾರಿ' ಎಂದು ಜನ ಇವರನ್ನು ಗುರುತಿಸಿದ್ದಾರೆ. ಇವರ ಯಕ್ಷಗಾನ ಸಂಬಂಧಿ ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಮತ್ತು ವಿವಿಧ ಸ್ಮರಣ ಸಂಚಿಕೆಯ ಪುಟಗಳನ್ನು ಅಲಂಕರಿಸಿವೆ. ಇವರಿಗೆ 2009ರ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸೀತಾನದಿ ಗಣಪಯ್ಯ ...

READ MORE

Related Books