ಕುರಿಯ ವಿಠಲ ಶಾಸ್ತ್ರಿ

Author : ಸೇರಾಜೆ ನಾರಾಯಣ ಭಟ್ಟ

Pages 56

₹ 45.00




Year of Publication: 2017
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಯಕ್ಷಗಾನ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಕುರಿಯ ವಿಠಲ ಶಾಸ್ತ್ರಿಗಳ ಬದುಕು-ಸಾಧನೆಯನ್ನ ಕಟ್ಟಿಕೊಡುವ ಕೃತಿಯಿದು. ಕಾಂತಾವರ ಕನ್ನಡ ಸಂಘವು ಈ ಪುಸ್ತಕವನ್ನು ಪ್ರಕಟಿಸಿದೆ. ನಾಡಿಗೆ ನಮಸ್ಕಾರ ಸರಣಿಯಲ್ಲಿ  ಪ್ರಕಟವಾದ 106ನೇ ಕೃತಿಯಿದು.

ಬಾಲನಟನಾಗಿ ರಂಗಪ್ರವೇಶ ಮಾಡಿದ ಶಾಸ್ತ್ರಿಗಳು ನಂತರ ಮೇಳಗಳ ಸಂಚಾಲಕರಾಗಿ ಯಶಸ್ವಿಯಾಗಿ ನಿರ್ವಹಿಸುವ ವರೆಗೂ ಬೆಳೆದರು. ಧರ್ಮಸ್ಥಳ ಮೇಳದ ಸಂಚಾಲಕರಾಗಿದ್ದ ಅವರು ರಂಗದ ಮೇಲೆಯೂ ಮಿಂಚುತ್ತಿದ್ದರು. ವೈವಿಧ್ಯಮಯ ಪಾತ್ರಗಳಿಗೆ ಹೆಸರುವಾಸಿಯಾಗಿದ್ದರು.

About the Author

ಸೇರಾಜೆ ನಾರಾಯಣ ಭಟ್ಟ

ಯಕ್ಷಗಾನ ಕಲಾವಿದ, ಲೇಖಕ ಸೇರಾಜೆ ನಾರಾಯಣ ಭಟ್ಟ ಅವರು ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು, ಕರೋಪಾಡಿ ಗ್ರಾಮದ ಸೇರಾಜೆಯಲ್ಲಿ ಜನಿಸಿದರು. ‘ಇತಿಹಾಸ’ದಲ್ಲಿ ಸ್ನಾತಕೋತ್ತರ ಪದವೀಧರರು. ಉಡುಪಿಯ ಎಂ.ಜಿ.ಎಂ. ಕಾಲೇಜು ಮತ್ತು ಮಂಗಳೂರಿನ ಕೆನರಾ ಪದವಿಪೂರ್ವ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ. ಹವ್ಯಾಸಿ ಯಕ್ಷಗಾನ ವೇಷಧಾರಿ ಮತ್ತು ತಾಳಮದ್ದಳೆ ಅರ್ಥಧಾರಿ. ಹಲವಾರು ಸ್ಮರಣ ಸಂಚಿಕೆಗಳಲ್ಲಿ ಸಂಪಾದಕರಾಗಿದ್ದರು. ಕರ್ನಾಟಕ ಸಾಂಸ್ಕೃತಿಕ ಕಲೆಗಳ ಉಳಿವಿಗಾಗಿ ಶ್ರಮಿಸುತ್ತಿರುವ ಅವರು ಜಿಲ್ಲಾ ಮಟ್ಟದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟಕರಾಗಿದ್ದಾರೆ. ಅವರ ಸೇವೆಯನ್ನು ಪರಿಗಣಿಸಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಯಕ್ಷಗಾನ ಸಮ್ಮೇಳನವು ಸನ್ಮಾನಿಸಿ ಗೌರವಿಸಿವೆ. ...

READ MORE

Related Books