ಗಂಗಾ ಪಾದೇಕಲ್ಲು

Author : ದಿವ್ಯಗಂಗಾ ಪಿ.

Pages 56

₹ 45.00




Year of Publication: 2017
Published by: ಕನ್ನಡ ಸಂಘ ಕಾಂತಾವರ
Address: ಕಾಂತಾವರ-576129 ಉಡುಪಿ ಜಿಲ್ಲೆ
Phone: 9900701666

Synopsys

ಹಿರಿಯ ಕತೆಗಾರ್ತಿ ಗಂಗಾ ಪಾದೇಕಲ್ಲು ಅವರ ಬದುಕು ಮತ್ತು ಬರೆಹ ಪರಿಚಯಿಸುವ ಕೃತಿಯನ್ನು ಕಾಂತಾವರದ ಕನ್ನಡ ಸಂಘವು ಪ್ರಕಟಿಸಿದೆ. ಕನ್ನಡ ಸಂಘದ ನಾಡಿಗೆ ನಮಸ್ಕಾರ ಸರಣಿಯ 177 ಪುಸ್ತಕವಿದು, 70ರ ದಶಕದಲ್ಲಿ ಬರವಣಿಗೆ ಆರಂಭಿಸಿದ ಗಂಗಾ ಅವರು ಸಣ್ಣಕತೆ ಮತ್ತು ಕಾದಂಬರಿಗಳನ್ನು ತಮ್ಮ ಅಭಿವ್ಯಕ್ತಿಯ ಮಾಧ್ಯಮ ಆಗಿಸಿಕೊಂಡವರು. ಆಪ್ತ-ಹೃದಯಂಗಮ ನಿರೂಪಣಾ ಶೈಲಿ, ವೈಚಾರಿಕ ದೃಷ್ಟಿಕೋನ, ವಾಸ್ತವಪ್ರಜ್ಞೆ, ತಾರ್ಕಿಕ ಮನೋಭಾವಗಳು ಅವರ ಬರೆಹದಲ್ಲಿ ಎದ್ದು ಕಾಣಿಸುತ್ತವೆ. ಕನ್ನಡ ಕಥನಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ ಗಂಗಾ ಪಾದೇಕಲ್ಲು ಅವರ ಜೀವನ-ಸಾಧನೆಯನ್ನು ಈ ಕೃತಿಯು ಕಟ್ಟಿಕೊಡುತ್ತದೆ.

About the Author

ದಿವ್ಯಗಂಗಾ ಪಿ.
(13 April 1982)

ಕವಯತ್ರಿ ದಿವ್ಯಗಂಗಾ ಪಿ. ಅವರು 1982 ಏಪ್ರಿಲ್ 13 ಕಾಸರಗೋಡಿನ ಪಳ್ಳದಲ್ಲಿ ಜನಿಸಿದರು. ’ಬೇಲಿಯಲ್ಲಿ ಅರಳಿದ ಹೂ’, ’ಬೆಂಕಿಯಲ್ಲಿ ಅರಳಿದ ಹೂ’ ಪ್ರಮುಖ ಕವನ ಸಂಕಲನಗಳು. ಹೊಸದಿಗಂತ ಯುಗಾದಿ ಕಥಾಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ, ದಿ. ಶ್ರೀಮತಿ ಕೆ.ವಿ. ರತ್ನಮ್ಮ ದತ್ತಿ ಪ್ರಶಸ್ತಿ, ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯ ವಿದ್ಯಾರ್ಥಿ ವಿಭಾಗದ ವಿಶೇಷ ಬಹುಮಾನ, 'ಬೇಲಿಯಲ್ಲಿ ಅರಳಿದ ಹೂ', ಯುವಬರಹಗಾರರ ಚೊಚ್ಚಲಕೃತಿ ಪ್ರಕಟಣೆ ಧನಸಹಾಯ ಪಡೆದಿದ್ಧಾರೆ. ...

READ MORE

Related Books