ಆಗಮಶಾಸ್ತ್ರ ಪಂಡಿತ ಶಂಕರ ಸೋಮಯಾಜಿ

Author : ಜಿ.ಎಂ. ಹೆಗಡೆ

Pages 56

₹ 45.00




Year of Publication: 2019
Published by: ಕನ್ನಡ ಸಂಘ
Address: ಕಾಂತಾವರ, ತಾ: ಕಾರ್ಕಳ, ಜಿ: ಉಡುಪಿ-574129,

Synopsys

ಕಾಂತವರದ ಕನ್ನಡ ಸಂಘದ ನಾಡಿಗೆ ನಮಸ್ಕಾರ ಶೀರ್ಷಿಕೆಯ ಕೃತಿ-ಆಗಮಶಾಸ್ತ್ರ ಪಂಡಿತ ಶಂಕರ ಸೋಮಯಾಜಿ. ಡಾ. ಜಿ.ಎಂ. ಹೆಗಡೆ ಅವರು ರಚಿಸಿದ್ದು, ಪರಂಪರಾಗತ ಆಗಮಶಾಸ್ತ್ರ ಪಂಡಿತರು. ಕೋಟದ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ಇವರು ವೇದಾಧ್ಯಯನ ಮಾಡಿದವರು. ಬಹುಭಾಷಾ ವಿದ್ವಾಂಸರು. ಇವರ ಬದುಕು-ಸಾಧನೆ- ಸನ್ಮಾನಗಳು, ಅವರ ಕೃತಿಗಳ ಪರಿಚಯ ಹೀಗೆ ಸಮಗ್ರವಾಗಿ ಶಂಕರ ಸೋಮಯಾಜಿ ಅವರ ಇಡೀ ವ್ಯಕ್ತಿತ್ವವನ್ನು ಪರಿಚಯಿಸುವ ಕೃತಿ ಇದು. ಈ ಕೃತಿಗೆ ಡಾ. ನಾ. ಮೊಗಸಾಲೆ ಗೌರವ ಸಂಪಾದಕರಿದ್ದು, ಡಾ. ಬಿ. ಜನಾರ್ದನ ಭಟ್ ಸಂಪಾದಕರು. 

About the Author

ಜಿ.ಎಂ. ಹೆಗಡೆ
(12 December 1952)

ವಿಮರ್ಶಕ ಜಿ.ಎಂ. ಹೆಗಡೆ ಅವರು  ಧಾರವಾಡದ ಕಿಟೆಲ್‌ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಸದ್ಯ ನಿವೃತ್ತರು. ಧಾರವಾಡದಲ್ಲಿ ನೆಲೆಸಿದ್ದಾರೆ. ’ಮಾಸ್ತಿಯವರ ವಿಮರ್ಶೆ: ಒಂದು ಅಧ್ಯಯನ’ ಇವರ ಪಿಎಚ್ ಡಿ ಮಹಾಪ್ರಬಂಧ.  ಕೃತಿಗಳು:  ಸಾಹಿತ್ಯ ಸಹೃದಯತೆ, ಪುಸ್ತಕಲೋಕ, ಸಾಹಿತ್ಯ ಮತ್ತು ಸಂಸ್ಕೃತಿ ಸ್ಪಂದನ, ಕವಿ ಕಣವಿ, ಕಿಟೆಲ್ ಜೀವನ ಹಾಗು ಕೃತಿ ಸಮೀಕ್ಷೆ.    ...

READ MORE

Related Books