ಯಕ್ಷಗಾನ ಕಲಾತಪಸ್ವಿ ಮಾಂಬಾಡಿ ನಾರಾಯಣ ಭಾಗವತರು

Author : ಪಾದೇಕಲ್ಲು ವಿಷ್ಣು ಭಟ್ಟ

Pages 52

₹ 45.00




Year of Publication: 2016
Address: ಕನ್ನಡ ಸಂಘ ಕಾಂತಾವರ (ರಿ.) ಕಾರ್ಕಳ, ಉಡುಪಿ ಜಿಲ್ಲೆ, ಕಾಂತಾವರ-574 129
Phone: 9900701666

Synopsys

“ನಾಡಿಗೆ ನಮಸ್ಕಾರ” ಎನ್ನುವುದು ಕಾಂತಾವರ ಕನ್ನಡ ಸಂಘವು ಮೂವತ್ತಕ್ಕೆ ಕಾಲಿಟ್ಟದ್ದನ್ನು ನೆನಪಿಸುವ ಮತ್ತು ಗುರುತಿಸುವ ಗ್ರಂಥಮಾಲೆ. ಈ ಮಾಲಿಕೆಯಲ್ಲಿ ಪ್ರಕಟವಾದ ಕೃತಿ ‘ಯಕ್ಷಗಾನ ಕಲಾತಪಸ್ವಿ ಮಾಂಬಾಡಿ ನಾರಾಯಣ ಭಾಗವತರು’. ಈ ಕೃತಿಯನ್ನು ಸಾಹಿತಿ ಡಾ.ಪಾದೇಕಲ್ಲು ವಿಷ್ಣು ಭಟ್ಟ ಅವರು ರಚಿಸಿದ್ದಾರೆ. ಕೃತಿಯ ಸಂಪಾದಕ ನುಡಿಗಳಲ್ಲಿ ಡಾ. ಬಿ. ಜನಾರ್ದನ ಭಟ್ ಬರೆದಿರುವಂತೆ ನಮ್ಮ ದಕ್ಷಿಣಕನ್ನಡ (ಉಡುಪಿ ಮತ್ತು ಕಾಸರಗೋಡು ಸೇರಿದ ಅವಿಭಜಿತ ಜಿಲ್ಲೆ) ಧಾರ್ಮಿಕ, ನೈತಿಕ, ಸಾಹಿತ್ಯಕ, ಸಾಂಸ್ಕೃತಿಕ ಅಧಃಪತನವಾಗದಂತೆ ಸದಾ ಎಚ್ಚರಿಕೆಯಿಂದಿರುವ ಒಂದು ನಾಡು. ಇಲ್ಲಿನ ಬಹುಮುಖೀ ಸಂಸ್ಕೃತಿಯ ನಿರ್ಮಾಣಕ್ಕಾಗಿ ದುಡಿದು ಕೀರ್ತಿಶೇಷ ರಾಗಿರುವ ಮತ್ತು ಈಗಲೂ ನಮ್ಮ ನಡುವೆ ಇರುವ ವಿದ್ವಾಂಸರು, ಚಿಂತಕರು, ಸಾಹಿತಿಗಳು, ಯಕ್ಷಗಾನ ಸಾಹಿತಿಗಳು ಹಾಗೂ ಕಲಾವಿದರು, ವರ್ಣಚಿತ್ರ ಕಲಾವಿದರು, ಶಿಲ್ಪಿಗಳು, ದಾರುಶಿಲ್ಪಿಗಳು, ವಿವಿಧ ಕ್ಷೇತ್ರಗಳನ್ನು ಪ್ರತಿನಿಧಿಸುವ ಸಮಾಜಸೇವಕರು, ಶಿಕ್ಷಕರು, ಅಭಿವೃದ್ಧಿಯ ಹರಿಕಾರರು, ಕೃಷಿ ಋಷಿಗಳು, ವೈದ್ಯರು ಮುಂತಾದವರ ಸಾಧನೆಗಳನ್ನು ದಾಖಲಿಸುವುದು ಸಮಾಜದ ಕರ್ತವ್ಯ. ಮುಂದೆ ಅಧ್ಯಯನ ಕಾರ್ಯಗಳನ್ನು ಕೈಗೊಳ್ಳುವವರಿಗೆ ಒಂದು ಮಾಹಿತಿ ಕೋಶವಾಗಿಯೂ ಈ ಮಾಲೆಯ ಪುಸ್ತಕಗಳು ಒದಗಿಬರಲಿವೆ. ಯಕ್ಷಗಾನ ಕಲಾತಪಸ್ವಿ ಮಾಂಬಾಡಿ ನಾರಾಯಣ ಭಾಗವತರು ಅವರ ಕುರಿತಾದ ಈ ಕೃತಿಯನ್ನು ಬರೆದುಕೊಟ್ಟು ಮಾಲೆಯ ಮಹತ್ವವನ್ನು ಹೆಚ್ಚಿಸಿದ ಡಾ. ಪಾದೇಕಲ್ಲು ವಿಷ್ಣು ಭಟ್ ಅವರಿಗೆ ಸಂಘವು ಋಣಿಯಾಗಿದೆ ಎಂದಿದ್ದಾರೆ.

About the Author

ಪಾದೇಕಲ್ಲು ವಿಷ್ಣು ಭಟ್ಟ
(06 February 1956)

ಪಾದೇಕಲ್ಲು ವಿಷ್ಣು ಭಟ್ಟ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದಲ್ಲಿ 06-02-1956 ರಂದು ಜನಿಸಿದರು. ಇವರ ತಂದೆ ಶ್ರೀ ಪಾದೇಕಲ್ಲು ನಾರಾಯಣ ಭಟ್ಟ, ತಾಯಿ ಶ್ರೀಮತಿ ಶಾರದಾ. ತಮ್ಮ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಪೂರ್ಣಗೊಳಿಸಿದ ಅವರು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪದವಿ ಪಡೆದರು. ಆನಂತರ ಮೈಸೂರು ವಿಶ್ವವಿದ್ಯಾನಿಲಯದಿಂದ ಪ್ರಥಮಸ್ಥಾನದಲ್ಲಿ ಎಂ.ಎ ಪದವಿ ಪಡೆದರು. ‘ಭಾಗವತದ ಯಕ್ಷಗಾನ ಪ್ರಸಂಗಗಳು’ ಎಂಬ ವಿಷಯದ ಮೇಲೆ ಅಧ್ಯಯನ ನಡೆಸಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಿಹೆಚ್.ಡಿ. ಪದವಿಯನ್ನು ಪಡೆದರು. ನಂತರ ಕನ್ನಡ ಉಪನ್ಯಾಸಕರಾಗಿ, ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ...

READ MORE

Related Books