ಕೊಡವೂರು ಭಾಗವತ ಮಾಧವ ರಾವ್

Author : ರಾಮಕೃಷ್ಣ ಕೊಡಂಚ

Pages 56

₹ 60.00




Year of Publication: 2020
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಕಾಂತಾವರ ಕನ್ನಡ ಸಂಘದ 'ನಾಡಿಗೆ ನಮಸ್ಕಾರ’ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 291ನೇ ಪುಸ್ತಕ ‘ಕೊಡವೂರು ಭಾಗವತ ಮಾಧವ ರಾವ್’. ಮಾಧವ ರಾವ್ ಅವರು ನಾಡಿನ ಶ್ರೇಷ್ಠ ನೃತ್ಯ ಕಲಾವಿದರು. ಪ್ರಾರಂಭದಲ್ಲಿ ಹಲವು ವರ್ಷ ಯಕ್ಷಗಾನ ರಂಗದಲ್ಲಿ ಸೇವೆಸಲ್ಲಿಸಿ, ನೃತ್ಯ ಕಲಿಯುವ ಆಸೆಯಿಂದ ಮೈಸೂರಿಗೆ ತೆರಳಿ ಒಂದು ಹೊಟೇಲ್‌ನಲ್ಲಿ ಕೆಲಸಕ್ಕೆ ಸೇರಿಕೊಂಡು ಮೈಸೂರಿನ ಪ್ರಸಿದ್ದ ದೇವದಾಸಿ ನೃತ್ಯ ಕಲಾವಿದೆ ಮತ್ತು ಗುರು ಮೂಗೂರು ಜೇಜಮ್ಮನವರಲ್ಲಿ ಸಂಪ್ರದಾಯ ಬದ್ಧ ಶಾಸ್ತ್ರೀಯ ನೃತ್ಯ ಶಿಕ್ಷಣ ಪಡೆದು ಮೂಗೂರು ಪರಂಪರೆಯನ್ನು ಕರ್ನಾಟಕದಲ್ಲಿ ಪ್ರಚುರಪಡಿಸಿದವರು. ಕರ್ನಾಟಕ ಸಂಗೀತ ನೃತ್ಯ ಅಕಾಡಮಿ ಪ್ರಶಸ್ತಿ ವಿಜೇತರಾಗಿರುವ, ಕರ್ನಾಟಕ ಕಲಾ ತಿಲಕ ಎಂದು ಬಿರುದು ಪಡೆದಿರುವ ಅವರ ಜೀವನ ಮತ್ತು ನೃತ್ಯ ಕಲಾರಾಧನೆ ಬಗ್ಗೆ ಸಂಕ್ಷಿಪ್ತ ಪರಿಚಯ ಈ ಕೃತಿಯಲ್ಲಿ ಸಿಗುತ್ತದೆ.

About the Author

ರಾಮಕೃಷ್ಣ ಕೊಡಂಚ

ಕಲಾವಿದ, ಲೇಖಕ ರಾಮಕೃಷ್ಣ ಕೊಡಂಚ 1968ರಲ್ಲಿ ಜನಿಸಿದರು. ಯಕ್ಷಗಾನ ಕಲಾವಿದರೂ ಆಗಿರುವ ಕೊಡಂಚರು ಬಡಗುತಿಟ್ಟು ಯಕ್ಷಗಾನವನ್ನು ಜಯಂತ್ ಕುಮಾರ್ ತೋನ್ಸೆಯವರಿಂದ, ತೆಂಕುತಿಟ್ಟು ಯಕ್ಷಗಾನವನ್ನು ಮುರಳೀಧರ್ ಭಟ್ ಕಟೀಲ್ ಮುಂತಾದ ಗುರುಗಳ ಬಳಿ ಕಲಿತಿದ್ದಾರೆ. ಮತ್ತು ಉದ್ಯಾವರ ಮಾಧವಾಚಾರ್ಯರ ರಂಗಪ್ರಯೋಗಗಳಲ್ಲಿ ಭಾಗವಹಿಸಿದ್ದಾರೆ. ಉಡುಪಿಯ ಅಕಾಡೆಮಿ ಕಲಾಶಾಲೆಯಲ್ಲಿ ನೃತ್ಯ ಗುರುವಾಗಿ ಸೇವೆಸಲ್ಲಿಸುತ್ತಿದ್ದಾರೆ. ‘ಕೊಡವೂರು ಭಾಗವತ ಮಾಧವ ರಾವ್’ ಜೀನಾಧಾರಿತ ಕೃತಿ ಅವರದೆ ಹೆಸರಿನಲ್ಲಿ ರಚಿಸಿದ್ದಾರೆ. ...

READ MORE

Related Books