
ಕಾಂತಾವರ ಕನ್ನಡ ಸಂಘವು 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯಲ್ಲಿ ಪ್ರಕಟಿಸಿರುವ 285ನೇ ಕೃತಿ ’ಶಾಂತಾ ಮಲ್ಲೇಶರಾವ್’. ಹಿರಿಯ ನಾಟಿವೈದ್ಯೆ ಎಂದು ಹೆಸರು ಮಾಡಿರುವ ಶಾಂತಾ ಮಲ್ಲೇಶರಾವ್‌ರವರು ಹುಟ್ಟಿದ್ದು ಉಡುಪಿ ತಾಲ್ಲೂಕಿನ ಸಾಸ್ತಾನದ ಪಕ್ಕದ ಪಾಂಡೇಶ್ವರದಲ್ಲಿ. ಶೃಂಗೇರಿಯಲ್ಲಿ ಶಾಂತಮ್ಮ ಎಂದೇ ಪ್ರಸಿದ್ಧರಾದ ಅವರು ಎಂಬತ್ತು ವಯಸ್ಸಿನ ತುಂಬುಜೀವಿ. ಪ್ರತಿದಿನ ಬರುವ ರೋಗಿಗಳಿಗೆ ಈಗಲೂ ಆರೋಗ್ಯ ಸಂಜೀವಿನಿಯಾಗಿ, ಅವರ ಪ್ರೀತಿಯ ನೇರ ಮಾತುಗಳಿಂದ, ರೋಗಿಗಳಿಗೆ ಆತ್ಮವಿಶ್ವಾಸದ ಧನಿಯಾಗಿದ್ದಾರೆ. ಅವರ ಬಳಿ ಚಿಕಿತ್ಸೆಗೆ ರಾಜ್ಯದೆಲ್ಲೆಡೆಯಿಂದ ಬರುತ್ತಾರೆ.
©2025 Book Brahma Private Limited.