ಲಕ್ಷ್ಮೀಶ ತೋಳ್ಪಾಡಿ

Author : ಗಂಗಾಧರ ಬೆಳ್ಳಾರೆ

Pages 52

₹ 45.00




Year of Publication: 2015
Published by: ಕನ್ನಡ ಸಂಘ ಕಾಂತಾವರ
Address: ಕಾಂತಾವರ-574129 ಉಡುಪಿ ಜಿಲ್ಲೆ
Phone: 9900701666

Synopsys

ಮಹಾಯುದ್ದಕ್ಕೆ ಮುನ್ನ’ ಎಂಬ ಪುಸ್ತಕದ ಮೂಲಕ ಸಾಹಿತ್ಯಲೋಕ ಪ್ರವೇಶಿಸಿದ ಲಕ್ಷ್ಮೀಶ ತೋಳ್ಪಾಡಿ ಅವರ ’ಬೆಟ್ಟ ಮಹಮ್ಮದನ ಬಳಿಗೆ ಬಾರದಿದ್ದರೆ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ತಮ್ಮ ಬರವಣಿಗೆ ಮಾತು ಉಪನ್ಯಾಸಗಳ ಮೂಲಕ ನಾಡಿನಾದ್ಯಂತ ಪರಿಚಿತ ಇರುವ ತೋಳ್ಪಾಡಿ ಅವರು ಮಹಾಭಾರತ-ರಾಮಾಯಣ ಸೇರಿದಂತೆ ಹಲವು ಕಾವ್ಯಗ್ರಂಥಗಳನ್ನು ಸೊಗಸಾಗಿ ವಿವರಿಸಬಲ್ಲವರು. ತೋಳ್ಪಾಡಿ ಅವರ ಬದುಕು-ಬರಹವನ್ನು ಪರಿಚಯಿಸುವ ಕೃತಿಯಿದು. ಕಾಂತಾವರದ ಕನ್ನಡ ಸಂಘವು ಪ್ರಕಟಿಸುತ್ತಿರುವ ನಾಡಿಗೆ ನಮಸ್ಕಾರ ಸರಣಿಯಲ್ಲಿ ಪ್ರಕಟವಾದ 117ನೇ ಪುಸ್ತಕವಿದು. 

About the Author

ಗಂಗಾಧರ ಬೆಳ್ಳಾರೆ

ಆಪ್ತಸಲಹೆಗಾರ, ಮನೋವಿಜ್ಞಾನಿ ಹಾಗೂ ಸಾಹಿತಿಯಾಗಿರುವ  ಗಂಗಾಧರ ಬೆಳ್ಳಾರೆ ಹುಟ್ಟಿದ್ದು 1965ರಲ್ಲಿ. ಮನೋವಿಜ್ಞಾನ ವ್ಯಾಸಂಗದೊಂದಿಗೆ ಪದವಿ ಹಾಗೂ ಕೌನ್ಸೆಲಿಂಗ್ ಮತ್ತು ಸೈಕೋಥೆರಪಿಯಲ್ಲಿ ಸ್ನಾತಕೋತ್ತರ ಪದವೀಧರರು. ಯಕ್ಷಗಾನ ಕಲಾವಿದ, ಮೃದಂಗವಾದಕ, ಮೇಕಪ್‌ ಕಲಾವಿದ, ನೃತ್ಯರೂಪಕ ಹಾಗೂ ನಾಟಕಗಳ ಕಲಾವಿದರಾಗಿಯೂ ಪ್ರಸಿದ್ಧರು. ಸೈಕೋಥೆರಪಿ, ಗ್ರೂಪ್ ಕೌನ್ಸೆಲಿಂಗ್, ಕ್ಲಿನಿಕಲ್ ಹಿಪ್ನೋಸಿಸ್ ಚಿಕಿತ್ಸಕರು.  ‘ಚಿಲಿಪಿಲಿ, ಗಾಜಿನ ತೇರು, ತಬ್ಬಲಿಯು ನೀನಲ್ಲ ಮಗಳೆ, ಕಲಿಕೆ ಹಾದಿಯ ಮಗು, ಕನಸು ಹೆಕ್ಕುವ ಮನಸು, ಇವರು ನೀವಲ್ಲ, ತಪ್ಪು ತಿದ್ದುವ ತಪ್ಪು, ಮೌನಗರ್ಭ’ ಅವರ ಕೃತಿಗಳು. ‘ನೆನಪಿಗೊಂದು ಕೌನ್ಸೆಲಿಂಗ್’ ಕೃತಿಗೆ ‘ಅಕಲಂಕ ಪುಸ್ತಕ ಪುರಸ್ಕಾರ ಪ್ರಶಸ್ತಿ’ ದೊರೆತಿದೆ.  ...

READ MORE

Related Books