ಪ್ರೊ. ಪ್ರಭಾಕರ ಶಿಶಿಲ

Author : ವೈ. ಶಂಕರ ಪಾಟಾಳಿ

Pages 56

₹ 45.00




Year of Publication: 2017
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಕಾಂತಾವರ ಕನ್ನಡ ಸಂಘದ 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 207ನೇ ಪುಸ್ತಕ ಪ್ರೊ. ಪ್ರಭಾಕರ ಶಿಶಿಲ. ಹಿರಿಯ ಸಾಹಿತಿ ಪ್ರೊ. ಪ್ರಭಾಕರ ಶಿಶಿಲ ಮೂಲತಃ ಕತೆಗಾರರು. ಶಿಶಿಲರು ಈಗ ಕನ್ನಡದ ಮಹತ್ವದ ಕಾದಂಬರಿಕಾರರು ಕೂಡ ಹೌದು.ರೆ. ಅವರ 'ಪುಂಸೀ' ಕಾದಂಬರಿ ಸಂಸ್ಕೃತಕ್ಕೆ ಮತ್ತು ತೆಲುಗಿಗೆ ಅನುವಾದ ಗೊಂಡಿದೆ. 'ಮಗಂಧಿ' ಇಂಗ್ಲೀಷಿಗೆ ಅನುವಾದಗೊಳ್ಳುತ್ತಿದೆ. ’ಪ್ರಭಾಕರ ಶಿಶಿಲರು ನಾನು ವಿಸ್ಮಯ, ಕುತೂಹಲ, ಮೆಚ್ಚುಗೆ ಗಳಿಂದ ಗಮನಿಸುವ ಕೆಲವು ವಿಶಿಷ್ಟ ಸಾಹಿತಿಗಳಲ್ಲಿ ಒಬ್ಬರು. ಪ್ರಾಧ್ಯಾಪಕ ಸಾಹಿತಿಗಳಲ್ಲಿ ಇವರು ಅಸಾಧಾರಣ ವ್ಯಕ್ತಿಯೆನ್ನಲು ಕಾರಣ-ಇವರ ಅಭಿರುಚಿ, ಪ್ರತಿಭೆ, ಕೃತಿ ನಿರ್ಮಿತಿ, ಸಾಧನೆ, ಶೋಧನೆಗಳ ಬಹುಮುಖತೆ! ಹೃದಯವಂತಿಕೆಯ ವಿಚಾರವಾದಿಯಾಗಿ, ಸೃಜನಶೀಲ ಕ್ರಾಂತದರ್ಶಿ ಯಾಗಿ, ಕ್ರೀಯಾಶೀಲ ಧೀಮಂತರಾಗಿ, ದೊಡ್ಡ ಕನಸುಗಾರನಾಗಿ ಕೂಡಾ ಇವರು ನನಗೆ ಇಷ್ಟವಾದವರು” – ಹೀಗೆಂದು ಶಿಶಿಲರನ್ನು ವರ್ಣಿಸಿದವರು ಕರ್ನಾಟಕದ ಬಹುದೊಡ್ಡ ವಿದ್ವಾಂಸರಾದ ಪ್ರೊ. ಅಮೃತ ಸೋಮೇಶ್ವರರು. ಕತೆಗಾರ, ಕಾದಂಬರಿಕಾರ, ಅರ್ಥಶಾಸ್ತ್ರ ಕೃತಿಗಳ ಲೇಖಕ, ಬಹುಮುಖ ಸಾಧಕ ಪ್ರಭಾಕರ ಶಿಶಿಲರ ಜೀವನ ಸಾಧನೆಗಳನ್ನು ಈ ಕೃತಿಯಲ್ಲಿ ದಾಖಲಿಸಲಾಗಿದೆ.

About the Author

ವೈ. ಶಂಕರ ಪಾಟಾಳಿ

ಡಾ. ವೈ. ಶಂಕರ ಪಾಟಾಳಿಯವರು ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಾ.ಪ್ರಭಾಕರ ಶಿಶಿಲ ಅವರರ ಮಾರ್ಗದರ್ಶನದಲ್ಲಿ 'ಪುಷೋದ್ಯಮ: ದ.ಕ. ಮತ್ತು ಉಡುಪಿ ಜಿಲ್ಲೆಗಳ ಒಂದು ತುಲನಾತ್ಮಕ ಅಧ್ಯಯನ' ಎಂಬ ವಿಷಯದಲ್ಲಿ ಪಿಹೆಚ್.ಡಿ ಪಡೆದಿದ್ದಾರೆ. ಎನ್.ಎಸ್.ಎಸ್. ಅಧಿಕಾರಿ, ವಾಗ್ಮಿ ಹಾಗೂ ಲೇಖಕರು, ಮಂಗಳೂರು ಮುಕ್ತ ವಿಶ್ವವಿದ್ಯಾಲಯದ ಸಂಪನ್ಮೂಲ ವ್ಯಕ್ತಿಯಾಗಿ, ಕಾಲೇಜಿನ ರೆಡ್ ರಿಬ್ಬನ್ ಕ್ಲಬ್ಬಿನ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಇವರ ಲೇಖನಗಳು ನಾಡಿನ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ತೋಟಗಾರಿಕೆ ಮತ್ತು ಪುಷೋದ್ಯಮ ಇವರ ನೆಚ್ಚಿನ ಹವ್ಯಾಸಗಳು. ...

READ MORE

Related Books