ಸಾಹಿತ್ಯ ಪೋಷಕ ಸಾಹಿತಿ ಪಿ. ಸೂರ್ಯನಾರಾಯಣ ಚಡಗ

Author : ಕೆ. ಶಾರದಾ ಭಟ್

Pages 56

₹ 45.00




Year of Publication: 2018
Published by: ಕನ್ನಡ ಸಂಘ ಕಾಂತಾವರ
Address: ಕರ್ಕಾಳ, ಉಡುಪಿ. 574 129
Phone: 9008978366

Synopsys

ಸೂರ್ಯನಾರಾಯಣ ಚಡಗರು ಖ್ಯಾತ ಸಾಹಿತಿಯಾಗಿ, ನೂರಾರು ಸಾಹಿತಿಗಳ ಕೃತಿ ಪ್ರಕಟಣೆಗೆ, ಪ್ರಸಿದ್ಧಿಗೆ ಕಾರಣರಾಗಿ ಸಾಹಿತ್ಯ ಪೋಷಕರಾಗಿಯೂ ಇದ್ದವರು. ಕಾದಂಬರಿಕಾರರಾಗಿ 'ಮನೆತನ' (ಸಾಹಿತ್ಯ ಅಕಾಡೆಮಿ ಪ್ರಶಸ್ತಿ), 'ಹೆಣ್ಣು ಹೊನ್ನು ಮಣ್ಣು' (ಈ ಕಾದಂಬರಿಯನ್ನಾಧರಿಸಿ 'ಪಗೆತ ಪುಗೆ' ಎಂಬ ತುಳು ಚಲನಚಿತ್ರ ನಿರ್ಮಾಣಗೊಂಡಿತು) ಮುಂತಾದ ಕಾದಂಬರಿಗಳನ್ನು ಪ್ರಕಟಿಸಿದ್ದ ಚಡಗರ ಹೆಸರಿನಲ್ಲಿ ಈಗ ವರ್ಷದ ಶ್ರೇಷ್ಠ ಕಾದಂಬರಿಗೆ 'ಚಡಗ ಪ್ರಶಸ್ತಿ ನೀಡಲಾಗುತ್ತಿದೆ.

ಚಡಗರ ಕುರಿತಾದ ಈ ಕೃತಿಯನ್ನು ರಚಿಸಿದವರು ಪಿ. ಸೂರ್ಯನಾರಾಯಣ ಚಡಗ ಸ್ಮಾರಕ ಪ್ರಶಸ್ತಿ ಸಮಿತಿಯ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿರುವ ಸಾಹಿತಿ ಕೆ. ಶಾರದಾ ಭಟ್. ಕೃತಿಯಲ್ಲಿ ಚಡಗರ ಜೀವನ ಮತ್ತು ಸಾಧನೆಯ ಸಂಪೂರ್ಣ ಚಿತ್ರಣ ನೀಡಲಾಗಿದೆ.

About the Author

ಕೆ. ಶಾರದಾ ಭಟ್
(24 October 1949)

ಲೇಖಕಿ ಶಾರದಾಭಟ್ ಅವರು ಮೂಲತಃ ಕುಂದಾಪುರ ತಾಲ್ಲೂಕಿನ ಕೋಟೇಶ್ವರದವರು. ತಂದೆ- ಕೆ. ವಿಠಲಭಟ್, ತಾಯಿ ಕಾವೇರಿಯಮ್ಮ. ಪ್ರಾರಂಭಿಕ ಶಿಕ್ಷಣ ಹುಟ್ಟಿದೂರಿನಲ್ಲಿ ಪಡೆದ ಅವರು ದೂರಸಂಪರ್ಕ ಇಲಾಖೆಯಲ್ಲಿ ಕೆಲಸ ದೊರೆತಿದ್ದರಿಂದ ಉದ್ಯೋಗದ ಜೊತೆಗೆ ಬೆಂಗಳೂರಿನ ಆಚಾರ‍್ಯ ಪಾಠಶಾಲಾ ಸಂಜೆ ಕಾಲೇಜಿನಿಂದ ಪಡೆದ ಬಿ.ಎ. ಪದವಿಪಡೆದರು. ಜೊತೆಗೆ ಬಾಹ್ಯ ವಿದ್ಯಾರ್ಥಿನಿಯಾಗಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಕಾನೂನು ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದರು. ಚಿಕ್ಕಂದಿನಿಂದಲೇ ಸಾಹಿತ್ಯದತ್ತ ಒಲವಿದ್ದ ಶಾರದ ಅವರು ಮಹಿಳೆಯರ ಶೋಷಣೆಯ ಬಗ್ಗೆ ಅರಿವು ಮೂಡಿಸಲು ಹಲವಾರು ಮಹಿಳಾ ಸಂಘಟನೆಗಳೊಡನೆ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೇ ಶೋಷಣೆ ಕುರಿತು ಆಕಾಶವಾಣಿಗಾಗಿ ಹಲವಾರು ನಾಟಕಗಳನ್ನು ಬರೆದು ನಿರ್ದೇಶಿಸಿದ್ದಾರೆ. ಉದ್ಯೋಗದ ...

READ MORE

Related Books