ಪೆರುವಡಿ ನಾರಾಯಣ ಭಟ್‌

Author : ನಾ. ಕಾರಂತ ಪೆರಾಜೆ

Pages 56

₹ 45.00




Year of Publication: 2018
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಕಾಂತಾವರದ ಕನ್ನಡ ಸಂಘವು ಪ್ರಕಟಿಸುತ್ತಿರುವ 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 241ನೇ ಪುಸ್ತಕ ಶಾಂತಾವರ ಪೆರುವಡಿ ನಾರಾಯಣ ಭಟ್. ಹಾಸ್ಯಕ್ಕೆ ಹೊಸ ವ್ಯಾಖ್ಯಾನ ಬರೆದ ಪೆರುವಡಿ ನಾರಾಯಣ ಭಟ್. ಪೆರುವಡಿ ನಾರಾಯಣ ಭಟ್ಟರು ಯಕ್ಷಗಾನದ ಹಾಸ್ಯಕ್ಕೆ ಹೊಸ ಆಯಾಮವನ್ನು ನೀಡಿದ ಕಲಾವಿದರು. ಯಕ್ಷಗಾನದ ಹಾಸ್ಯದಲ್ಲಿ ಅಶ್ಲೀಲ ಬಾರದಂತೆ ಎಚ್ಚರ ವಹಿಸಿ, ವೇಷಗಳಲ್ಲಿ ಹೊಸತನವನ್ನೂ, ಕಲ್ಪನೆಯ ವಿಸ್ತಾರವನ್ನೂ, ಔಚಿತ್ಯವನ್ನೂ ತೋರಿದವರು. ಅವರಿಗೆ ಉತ್ತರ ಕನ್ನಡದಲ್ಲಿ 'ರಾಜಾ ಹಾಸ್ಯ ಮನ್ನಣೆಯನ್ನು ನೀಡಿ ಗೌರವಿಸಿದ್ದಾರೆ. ಸ್ವತಃ ಯಕ್ಷಗಾನ ಮೇಳದ ಯಜಮಾನ ರಾಗಿಯೂ ಪೆರುವಡಿಯವರು ಈ ಕಲೆಗೆ ಸೇವೆ ಸಲ್ಲಿಸಿದ್ದಾರೆ. ಅವಿಸ್ಮರಣೀಯವಾದ ಪೆರುವಡಿಯವರ ಕೊಡುಗೆಯನ್ನು ಸಮರ್ಥವಾಗಿ ನುಡಿ ಚಿತ್ರವಾಗಿ ದಾಖಲಿಸಲಾಗಿದೆ.

About the Author

ನಾ. ಕಾರಂತ ಪೆರಾಜೆ
(19 August 1964)

ಪತ್ರಕರ್ತರಾಗಿರುವ ನಾ. ಕಾರಂತ ಪೆರಾಜೆ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸದ್ಯ ಸುಳ್ಯದ ನಿವಾಸಿ ಅಗಿರುವ ಅವರು ಯಕ್ಷಗಾನದಲ್ಲಿ ವಿಶೇಷ ಅಸಕ್ತಿ ಉಳ್ಳವರು.  ನಾ. (ನಾರಾಯಣ) ಕಾರಂತ ಪೆರಾಜೆಯವರು ಪತ್ರಕರ್ತ, ಸಾಹಿತಿ, ಯಕ್ಷಗಾನ ಕಲಾವಿದ, ಕೃಷಿಕ ಮತ್ತು ಚಿಂತಕ. ಅವರು ಕೃಷಿ ಮಾಸಿಕ ’ಅಡಿಕೆ ಪತ್ರಿಕೆ’ಯಲ್ಲಿ ಸಹಾಯಕ ಸಂಪಾದಕರಾಗಿದ್ದಾರೆ. ಕೃಷಿ, ಗ್ರಾಮೀಣ ರಂಗದ ಬಗ್ಗೆ, ಯಕ್ಷಗಾನದ ಬಗ್ಗೆ ಮಾಹಿತಿಪೂರ್ಣವಾಗಿ ಆಕರ್ಷಕವಾಗಿ ಬರೆಯುವ ಕಾರಂತರು 'ನೆಲದ ನಾಡಿ' (ಉದಯವಾಣಿ), ಹೊಸದಿಗಂತದಲ್ಲಿ 'ಮಾಂಬಳ' (ಹೊಸದಿಗಂತ) “ದಧಿಗಿಣತೋ' (ಪ್ರಜಾವಾಣಿ) ಅಂಕಣಗಳನ್ನು ಬರೆಯುತ್ತಿದ್ದಾರೆ. 'ತಳಿತಪಸ್ವಿ', 'ಮಾಂಬಳ', 'ಮನಮಿಣುಕು', 'ಮಣ್ಣಮಿಡಿತ', 'ಮಣ್ಣಮಾಸು', ...

READ MORE

Related Books