ಪ್ರೊ. ಪಿ. ಸುಬ್ರಾಯ ಭಟ್

Author : ಪಿ. ಕೃಷ್ಣ ಭಟ್

Pages 56

₹ 45.00




Year of Publication: 2018
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಅಭಿಜಾತ ಕಾವ್ಯ ವ್ಯಾಖ್ಯಾನಕಾರರಾಗಿರುವ ಪ್ರೊ. ಪಿ. ಸುಬ್ರಾಯ ಭಟ್ ಅವರ ಕುರಿತು ಕಾಂತಾವರ ಕನ್ನಡ ಸಂಘ ಈ ಕೃತಿಯನ್ನು ಪ್ರಕಟಿಸಿದೆ. 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 255ನೇ ಪುಸ್ತಕವಾಗಿದೆ. ಕರಾವಳಿ ಕರ್ನಾಟಕದ ಪಂಡಿತ ಪರಂಪರೆಗೆ ಸೇರಿದವರಲ್ಲಿ ಪಿ. ಸುಬ್ರಾಯ ಭಟ್‌ ಅವರು ಪ್ರಮುಖರು. ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗವನ್ನು ಕಟ್ಟಿ ಬೆಳೆಸಿದ ಪ್ರೊ. ಪಿ. ಸುಬ್ರಾಯ ಭಟ್ಟರು. ಸಂಸ್ಥೆಯ ಇತಿಹಾಸದ ದೃಷ್ಟಿಯಿಂದ ಅವರು ಕಾಲೇಜಿನಲ್ಲಿದ್ದ ಕಾಲ ಪ್ರಸ್ವವಾಗಿದ್ದರೂ (ಸು.19 ವರ್ಷ) ಅವರು ಮಾಡಿದ ಕಾರ್ಯಗಳು, ಸಲ್ಲಿಸಿದ ಸೇವೆ, ನೀಡಿದ ಕೊಡುಗೆ ಅವಿಸ್ಮರಣೀಯ ಹಾಗೂ ಅವಲೋಕನೀಯ. 'ಶಾಸ್ತ್ರ ಸಾಹಿತ್ಯ ವಿಹಾರಿ' ಎನ್ನುವ ವಿಶೇಷಣ ಇವರಿಗೆ ಚೆನ್ನಾಗಿ ಒಪ್ಪುತ್ತದೆ. ದಕ್ಷಿಣ ಕನ್ನಡದ ಪಂಡಿತ ಪರಂಪರೆಯ ಗಟ್ಟಿ ಕೊಂಡಿಯಾಗಿ ಕಾಣಿಸುವ ಇವರು ಶಬ್ದಮಣಿ ದರ್ಪಣದಂತಹ ಶಾಸ್ತ್ರಗ್ರಂಥಗಳನ್ನೂ, ಸೃಜನಶೀಲ ಸಾಹಿತ್ಯವನ್ನೂ ರಸಾರ್ದ್ರವಾಗಿ ಬೋಧಿಸಬಲ್ಲವರು.

About the Author

ಪಿ. ಕೃಷ್ಣ ಭಟ್

ಸುರತ್ಕಲ್ ಗೋವಿಂದ ದಾಸ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆಸಲ್ಲಿಸಿರುವ  ಡಾ. ಪಿ. ಶ್ರೀಕೃಷ್ಣ ಭಟ್ ಅವರು 1969ರಲ್ಲಿ ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗಕ್ಕೆ ಉಪನ್ಯಾಸಕನಾಗಿ ಸೇರಿದರು. ನಂತರ ಪ್ರೊಫೆಸರ್ ಆಗಿ ಬಡ್ತಿ ಪಡೆದು ವಿಭಾಗ ಮುಖ್ಯಸ್ಥನಾದರು. ನಿವೃತ್ತಿಯ ನಂತರ, 1998ರಿಂದ ಹತ್ತು ವರ್ಷಗಳ ಕಾಲ ಕಣ್ಣೂರು ವಿಶ್ವವಿದ್ಯಾಲಯದ ಭಾರತೀಯ ಭಾಷಾ ಅಧ್ಯಯನಾಂಗದ ಮೊದಲ ಸಂಯೋಜಕರಾಗಿ ಸೇವೆಸಲ್ಲಿಸಿದ್ದಾರೆ. ಸ್ನಾತಕೋತ್ತರ ತರಗತಿಗಳಲ್ಲಿ ಭಾಷಾ ವಿಜ್ಞಾನವೂ ಸೇರಿದಂತೆ ಶಾಸ್ತ್ರ ವಿಷಯಗಳನ್ನು ಪಾಠ ಹೇಳುತ್ತಿದ್ದ ಅವರ ಸ್ವರಭಾರ, ಉಚ್ಚಾರದ ಸ್ಪಷ್ಟತೆಯ ಮೋಡಿಗೆ ಒಳಗಾಗದ ವಿದ್ಯಾರ್ಥಿಗಳಿಲ್ಲ. 'ಶಾಸನ ಮತ್ತು ವೀರಗಲ್ಲುಗಳು', 'ಕನ್ನಡ ಸಾಂಪ್ರದಾಯಿಕ ವ್ಯಾಕರಣಗಳು', ...

READ MORE

Related Books