ಉ.ಕ. ಸುಬ್ಬರಾಯಾಚಾರ್ಯ

Author : ಬೈಕಾಡಿ ಜನಾರ್ದನ ಆಚಾರ್

Pages 48

₹ 33.00




Year of Publication: 2007
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಕಾಂತಾವರ ಕನ್ನಡ ಸಂಘದ ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 15ನೆಯ ಪುಸ್ತಕ. ಗಾಂಧೀಜಿಯವರ ಅನುಯಾಯಿಯಾಗಿದ್ದ ಅವರು ಉ.ಕಾ. ಸುಬ್ಬರಾಯಾಚಾರ್ಯ ಅವರು ಗಾಂಧೀಜಿಯ 'ಜಗತ್ತಿನಲ್ಲಿ ಪ್ರೀತಿಯಿಂದ ಪರಿವರ್ತನೆಯಾಗದ್ದು ಯಾವುದೂ ಇಲ್ಲ' ಎಂಬುದನ್ನು ಖಚಿತವಾಗಿ ನಂಬಿದ್ದರು. ಹಾಗೆ ನಡೆದುಕೊಂಡವರು ಕೂಡ. ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ವಿದ್ಯಾರ್ಥಿ ಕ್ಷೇಮಪಾಲಕರಾಗಿ, ಅವರು ತರಗತಿಯ ಹೊರಗೆ ಬೀರಿದ ಪ್ರಭಾವ ಅಸಾಧಾರಣ. ಸಾಹಿತ್ಯ ಮತ್ತು ಸಂಗೀತವನ್ನು ಜೀವನ ಪ್ರೀತಿಯ ಭಾಗವಾಗಿ ಸ್ವೀಕರಿಸಿದ್ದ ಅವರು 25ಕ್ಕೂ ಕೃತಿ ರಚಿಸಿದ್ದಾರೆ. ಇಂದಿನ ತಲೆಮಾರು ಬೆರಗುಪಡುವ ಹಾಗೆ ಬಾಳಿದ ಬದುಕು ಅವರನ್ನು ನೈತಿಕ ಶಿಕ್ಷಣದ ಚಿಂತಕ ಉ. ಕ. ಸುಬ್ಬರಾಯಾಚಾರ್ಯರು. ಅವರ ಜೀವನ ಮತ್ತು ಸಾಧನೆಯನ್ನು ಈ ಕೃತಿ ಕಟ್ಟಿಕೊಡುತ್ತದೆ.

About the Author

ಬೈಕಾಡಿ ಜನಾರ್ದನ ಆಚಾರ್

ದಕ್ಷಿಣ ಕನ್ನಡ ಜಿಲ್ಲೆಯ ಮಾನವ ಸಂಪನ್ಮೂಲ ಅಭಿವೃದ್ಧಿ ಕಾರ್ಯಕ್ರಮಗಳ ಸಂಪನ್ಮೂಲ ವ್ಯಕ್ತಿಗಳಲ್ಲಿ ಬಹುಮುಖ್ಯ ಮತ್ತು ಜನಪ್ರಿಯ ಹೆಸರು ಬೈಕಾಡಿಯವರದ್ದು. ರಾಷ್ಟ್ರಮಟ್ಟದ ಮಾನವ ಸಂಪನ್ಮೂಲ ಅಭಿವೃದ್ಧಿ ಕಾರ್ಯಕ್ರಮ ಏರ್ಪಡಿಸುವ ಪ್ರತಿಷ್ಠಿತ ಸಂಸ್ಥೆಗಳಾದ Aim Insights ಮತ್ತು Abhiyanam ಇವರ ನೇತೃತ್ವದಲ್ಲಿ ಸಂಘಟಿಸಿದ ಶಿಬಿರ ಕಮ್ಮಟಗಳು ನೂರಕ್ಕೂ ಹೆಚ್ಚು. ಕಾನೂನು, ಅರ್ಥಶಾಸ್ತ್ರ, ಶಿಕ್ಷಣ ಶಾಸ್ತ್ರಗಳ ಪದವೀಧರರಾಗಿರುವ ಅವರು ಹಿಂದಿ ಇಂಗ್ಲೀಷ್ ಭಾಷೆಗಳಲ್ಲೂ ಸ್ನಾತಕೋತ್ತರ ಪದವಿಗಳ ಪಡೆದವರು. ಮಂಗಳೂರಿನ ಕೆನರಾ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿರುವ ಅವರು ಮಕ್ಕಳಲ್ಲಿ ಆತ್ಮಸ್ಥೆರ್ಯ, ಕೌಶಲ್ಯ, ಸಂವಹನ ಮತ್ತು ಪ್ರತಿಭೆ ಹೆಚ್ಚಿಸುವ ಶಿಬಿರಗಳಲ್ಲಿ ಸದಾ ತೊಡಗಿಸಿಕೊಂಡಿರುತ್ತಾರೆ. ರಂಗಭೂಮಿ ಅವರ ...

READ MORE

Related Books