ಗುರುರಾಜ್ ಸನಿಲ್

Author : ಗಣನಾಥ ಎಕ್ಕಾರು

Pages 56

₹ 45.00




Year of Publication: 2018
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಕಾಂತಾವರ ಕನ್ನಡ ಸಂಘದ 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 244 ಪುಸ್ತಕ ’ಜೀವ ರಕ್ಷಕ ಉರಗತಜ್ಞ ಗುರುರಾಜ್ ಸನಿಲ್’. ಒಂದು ರೀತಿಯಲ್ಲಿ ಉರಗ ವಿಜ್ಞಾನಿ ಎಂದು ಕರೆಯಬಹುದಾದ ಗುರುರಾಜ್ ಸನಿಲ್ ಇದುವರೆಗೆ ಸಾವಿರಾರು ಹಾವುಗಳನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ನೂರಾರು ಪ್ರಾತ್ಯಕ್ಷಿಕೆ ಗಳನ್ನು ನಡೆಸಿ ಜನರಲ್ಲಿ ಉರಗಪ್ರೀತಿಯನ್ನು ಮೂಡಿಸಿದ್ದಾರೆ. ಹಾವುಗಳ ಕುರಿತಾಗಿ ಜನರಲ್ಲಿ ನೈಜ ಅರಿವು ಮೂಡಿಸುವುದಕ್ಕಾಗಿ ಅವರು ನೂರಾರು ಪ್ರಾತ್ಯಕ್ಷಿಕೆ, ಶಿಬಿರಗಳನ್ನು ನಡೆಸಿದ್ದಾರೆ. ಅವರು ಪ್ರಕಟಿಸಿರುವ ಹಾವುಗಳ ಕುರಿತಾದ ಗ್ರಂಥಗಳು ಅವರ ನೈಜ ಅಧ್ಯಯನಶೀಲತೆಗೆ ಸಾಕ್ಷಿಯಾಗಿವೆ. ಆತ್ಮಕಥನ ಮತ್ತು ಕತೆಗಳನ್ನೂ ಬರೆದಿರುವ ಸನಿಲ್ ಅವರು ಉತ್ತಮ ಬರಹಗಾರರೂ ಹೌದು. ಅವರನ್ನು ಪರಿಚಯಿಸುವ ಕೃತಿಯಿದು.

About the Author

ಗಣನಾಥ ಎಕ್ಕಾರು

ತುಳು ಹಾಗೂ ಕನ್ನಡ ಸಾಹಿತಿ, ಜಾನಪದ ವಿದ್ವಾಂಸ ಡಾ. ಗಣನಾಥ ಎಕ್ಕಾರು ಮುಂಬಯಿ ವಿ.ವಿ.ಯಿಂದ ಕನ್ನಡ ಎಂ.ಎ. ಪದವಿಯನ್ನು ಪ್ರಥಮ ರ್‍ಯಾಂಕ್ ಮತ್ತು ಚಿನ್ನದ ಪದಕದೊಂದಿಗೆ ಪಡೆದಿದ್ದಾರೆ. ಮಂಗಳೂರು ವಿ.ವಿ.ಯಿಂದ ಪಿಹೆಚ್.ಡಿ. ಪಡೆದಿರುವ ಅವರು ಕನ್ನಡ ಪ್ರಾಧ್ಯಾಪಕರಾಗಿ, ಪ್ರಾಚಾರ್ಯರಾಗಿ ಇಪ್ಪತ್ತೈದು ವರ್ಷ ಸೇವೆಸಲ್ಲಿಸಿದ್ದಾರೆ. ಪ್ರಸ್ತುತ ರಾಷ್ಟ್ರೀಯ ಸೇವಾ ಯೋಜನೆಯ (ಎನ್ನೆಸ್ಸೆಸ್) ರಾಜ್ಯ ಯೋಜನಾಧಿಕಾರಿಯಾಗಿ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ವಿಶ್ವವಿದ್ಯಾನಿಲಯ ಕನ್ನಡ ಅಧ್ಯಾಪಕ ಸಂಘದ ಅಧ್ಯಕ್ಷರಾಗಿ, ಉಡುಪಿ ತಾಲೂಕು ಕ.ಸಾ.ಪ. ಅಧ್ಯಕ್ಷರಾಗಿ ಸ್ಮರಣೀಯ ಸೇವೆ ಸಲ್ಲಿಸಿದವರು. ಪ್ರಸಕ್ತ ಕೆಮ್ಮಲಜೆ ಜಾನಪದ ಪ್ರಕಾಶನ, ಕೆಮ್ತೂರು ದೊಡ್ಡಣ್ಣ ಶೆಟ್ಟಿ ಸಾಂಸ್ಕೃತಿಕ ...

READ MORE

Related Books