
‘ಹಮೀದ್ ದಳವಾಯಿ ಮತ್ತು ಮಹರ್ಷಿ ವಾಲ್ಮೀಕಿ’ ಕೆ. ಸತ್ಯನಾರಾಯಣ ಅವರ ಒಂದು ಸಾಂಸ್ಕೃತಿಕ ವಾಚಿಕೆಯಾಗಿದೆ. ಹಲವು ಕಾರಣಗಳಿಗಾಗಿ ಇದೊಂದು ವಿಶಿಷ್ಟ ಪುಸ್ತಕ. ಇಲ್ಲಿ ಕತೆಗಳಿವೆ, ಪ್ರಬಂಧಗಳಿವೆ. ವ್ಯಕ್ತಿಚಿತ್ರವಿದೆ, ಪುಸ್ತಕ ಸಮೀಕ್ಷೆಯಿದೆ, ಸಾಮಾಜಿಕ, ರಾಜ- ಕೀಯ ವಿಶ್ಲೇಷಣೆ ಇದೆ. ಸಾಂಸ್ಕೃತಿಕ ಟಿಪ್ಪಣಿಗಳಿವೆ. ಈ ಎಲ್ಲ ಬರಹಗಳು ಒಂದು ರೀತಿಯ ಅಸಹಾಯಕತೆಯಿಂದ ಮೂಡಿದವು. ಸಾರಸ್ವತ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಹಿರಿಯ ಸಾಹಿತಿ- ಬರೆಹಗಾರರಾದ ಕೆ ಸತ್ಯನಾರಾಯಣ ಅವರು ಅತ್ಯಂತ ಸಂಕೀರ್ಣವಾದ ವಿಷಯವೊಂದನ್ನು ಕೈಗೆತ್ತಿಕೊಂಡು, ಸಾಂಸ್ಕೃತಿಕ ಸಂವಾದಗಳೇ ಅಸಂಭವ ಎನಿಸುವಂತಹ ವರ್ತಮಾನದ ಸಂಕೀರ್ಣ ಕಾಲಘಟ್ಟದಲ್ಲಿ ಅದರ ಬಹು ಆಯಾಮಗಳನ್ನು ಓದುಗರ ಎದುರಿಗೆ ಇರಿಸಿದ್ದಾರೆ.
©2025 Book Brahma Private Limited.