
`ಶ್ಲೋಕ ಸಂಸ್ಕಾರ’ ಕೃತಿಯು ಕೆ. ಗಣಪತಿ ಭಟ್ಟ ಅವರ ಲಕ್ಷ್ಮೀ ಪೂಜಾವಿಧಾನ ಕೃತಿಯಾಗಿದೆ. ಎಂಟು ವರ್ಷಗಳ ಹಿಂದೆ ಈ ಪುಸ್ತಕವನ್ನು ಸ್ವತಂತ್ರವಾಗಿ ಪ್ರಕಟಿಸಲಾಗಿತ್ತು. ಅನಂತರ ಸಂಧ್ಯಾವಂದನೆ ಮತ್ತು ದೇವಪೂಜಾ ವಿಧಾನವನ್ನು ಸೇರಿಸಿ 2005 ರಲ್ಲಿ ಹಾಗೂ ಕೆಲವು ಪರಿಷ್ಕಾರದೊಂದಿಗೆ 2007 ರಲ್ಲಿ ಮುದ್ರಿಸಿ ಇದೀಗ ಮಹಿಳೆಯರ ಸೂಚನೆಯಂತೆ ಪ್ರತ್ಯೇಕವಾಗಿ ಪ್ರಕಟಿಸಲಾಗಿದೆ. ಎರಡನ್ನೂ ಸೇರಿಸಿ ಧ್ವನಿಮುದ್ರಿಕೆ ಸಜ್ಜುಗೊಳಿಸಲಾಗಿದೆ. ಶಿಬಿರಗಳಿಗೆ, ಉಡುಗೊರೆ ನೀಡಲು, ಅತಿಥಿಗಳಿಗೆ ಕಾಣಿಕೆ ನೀಡಲು ಪ್ರತಿಷ್ಠಾನದ ಎಲ್ಲ ಪ್ರಕಟಣೆಗಳು ಬಹೂಪಯುಕ್ತವಾಗಿವೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಈ ಪುಸ್ತಕದಲ್ಲಿ ಲಕ್ಷ್ಮೀ ಆರತಿ ಹಾಡು, ಕನಕಧಾರಾ, ಲಕ್ಷ್ಮೀಸ್ತೋತ್ರಗಳನ್ನು ಅಧಿಕವಾಗಿ ಮುದ್ರಿಸಲಾಗಿದೆ.
©2025 Book Brahma Private Limited.