‘ಹಿತೋಪದೇಶ’ ಮಕ್ಕಳಿಗಾಗಿ ಕುನ್ವರ್ ಅನಿಲ್ ಕುಮಾರ್ ಅವರ ಇಂಗ್ಲಿಷ್ ಕೃತಿಯನ್ನು ಪತ್ರಕರ್ತ, ಲೇಖಕ ಜಿ.ಕೆ. ಮಧ್ಯಸ್ಥ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಇಲ್ಲಿ ವಿಶೇಷ ಚಿತ್ರಗಳೊಂದಿಗೆ ಚುರುಕಾದ ರೀತಿಗಳನ್ನು, ಚತುರ ಆಲೋಚನೆ ಮತ್ತು ಯಶಸ್ಸಿನ ಹೆಜ್ಜೆಗಳನ್ನು ಕಲಿಸುವ ಪ್ರಾಚೀನ ಕಾಲದ ಪ್ರಾಣಿಗಳ ಕತೆಯನ್ನು ನೀಡಲಾಗಿದೆ. ಮಕ್ಕಳ ಮನೋವಿಕಾಸಕ್ಕೆ ಮತ್ತು ಕಲ್ಪನಾ ಸಾಮರ್ಥ್ಯಕ್ಕೆ ಕತೆಗಳ ಕೊಡುಗೆ ಅಪಾರ. ಹಾಗಾಗಿ ವಸಂತ ಪ್ರಕಾಶನ ಬಾಲ ಸಾಹಿತ್ಯದ ಹಲವು ಮಾಲಿಕೆಗಳನ್ನು ಹೊರತಂದು ಪ್ರಪಂಚದ ವಿಭಿನ್ನ ಕತೆಗಳನ್ನು ಕನ್ನಡದ ಓದುಗರಿಗೆ ತಲುಪಿಸಿದೆ. ಅದರ ಭಾಗವಾಗಿ ಪ್ರಕಟವಾದ ಕೃತಿ- ಹಿತೋಪದೇಶ.
©2021 Bookbrahma.com, All Rights Reserved