
ಪ್ರಕಾಶ್ ಕಂಬತ್ತಳ್ಳಿ ಅವರ ಮಕ್ಕಳ ಕತೆಗಳ ಸಂಗ್ರಹ ‘ನಸಿರುದ್ದೀನನ ಕಥೆಗಳು’. "ನಸಿರುದ್ದೀನನದು ವರ್ಣರಂಜಿತ ವ್ಯಕ್ತಿತ್ವ. ನಮ್ಮಲ್ಲಿ, ತೆನಾಲಿರಾಮನ ಕತೆಗಳು,ಬೀರ್ ಬಲ್ಲನ ಕತೆಗಳು ಪ್ರಸಿದ್ಧವಾಗಿರುವಂತೆ ನಸಿರುದ್ದೀನನ ಕತೆಗಳೂ ಪ್ರಸಿದ್ಧವಾಗಿವೆ. ಈತ ಒಬ್ಬ ಸಾಮಾನ್ಯ ಜೀವಿಯಾಗಿದ್ದ. ಬಡವರ ಪಕ್ಷಪಾತಿಯಾಗಿದ್ದ. ತನ್ನ ಕಾಲದ ಸಮಾಜವನ್ನು ಒರೆಗೆ ಹಚ್ಚಿ, ಅದನ್ನು ತಿದ್ದುವ ಕೆಲಸದಲ್ಲಿ ಹಿಂದೆ ಮುಂದೆ ನೋಡುತ್ತಿರಲಿಲ್ಲ. ತಪ್ಪು ಯಾರು ಮಾಡಿದ್ದರೂ ಸರಿ, ಖಂಡಿಸದೆ ಬಿಡುತ್ತಿರಲಿಲ್ಲ" - ಇಂತಹ ನಸಿರುದ್ದೀನನ ಕಥೆಗಳನ್ನು ಪ್ರಕಾಶ್ ಕಂಬತ್ತಳ್ಳಿಯವರು ಇಲ್ಲಿ ಸ್ವಾರಸ್ಯಪೂರ್ಣವಾಗಿ ಚಿತ್ರಿಸಿದ್ದಾರೆ.
©2025 Book Brahma Private Limited.