
'ಮಾಯದ ಗಂಟೆ’ ಅಣ್ಣ ತಮ್ಮರ ಕತೆಯನ್ನೊಳಗೊಂಡ ಕೃತಿ. ಅಣ್ಣ ಮೋಸ ಮಾಡುವುದು, ತಮ್ಮ ಮೋಸಕ್ಕೊಳಗಾಗುವುದು ಇಲ್ಲಿನ ಕತೆ. ಕಡೆಯಲ್ಲಿ ಮಾಯದ ಗಂಟೆ ಕಾಣಿಸಿಕೊಂಡು, ಮಾಯದ ಬಡಿಗೆ ಕಾಣಿಸಿಕೊಂಡು ತೊಂದರೆಗೊಳಗಾದ ತಮ್ಮನಿಗೆ ಆಸರೆಯಾಗಿ ನಿಲ್ಲುತ್ತದೆ. ಜೊತೆಗೇ ಕೆಡುಕನ್ನು ಬಯಸುವ ಅಣ್ಣನಿಗೆ ತಕ್ಕ ಶಿಕ್ಷೆಯಾಗುತ್ತದೆ. ಹಳ್ಳಿವಾಡದವರ ಬಾಯಲ್ಲಿದ್ದ ಈ ಕತೆ ಚಂದ್ರಕಾಂತ ಕರದಳ್ಳಿ ಅವರ ಬರವಣಿಗೆಯಲ್ಲಿ ಮಕ್ಕಳಿಗೆಂದೇ ವಿಶೇಷವಾಗಿ ಮೈದಳೆದಿದೆ.
©2025 Book Brahma Private Limited.