ಜನಪ್ರಿಯ ರಾಮಾಯಣ

Author : ಈಶ್ವರಚಂದ್ರ ಚಿಂತಾಮಣಿ

Pages 50

₹ 0.00




Year of Publication: 1956
Published by: ಕರ್ನಾಟಕ ಪ್ರಾದೇಶಿಕ ಸಮಾಜ ಶಿಕ್ಷಣ ಸಮಿತಿ
Address: ಬೆಳಗಾವಿ

Synopsys

ಮಕ್ಕಳ ಸಾಹಿತಿ ಈಶ್ವರಚಂದ್ರ ಚಿಂತಾಮಣಿ ಅವರು ರಾಮಾಯಣ ಕುರಿತು ಮಕ್ಕಳಿಗಾಗಿ ಬರೆದ ಕೃತಿ-ಜನಪ್ರಿಯ ರಾಮಾಯಣ. ಕನ್ನಡದಲ್ಲಿ ಈಗಾಗಲೇ ಸಣ್ಣ-ದೊಡ್ಡ ರಾಮಾಯಣಗಳು ಬಂದಿವೆ. ಆದರೆ, ಶೈಲಿ ಹಾಗೂ ಓದಿನಿಂದ ಮಕ್ಕಳಿಗೆ ಎಟಕುತ್ತಿಲ್ಲ. ಈ ಕೊರತೆಯನ್ನು ನೀಗಿಸಲು ಪ್ರಯತ್ನಿಸಿದ್ದೇನೆ. ರಾಮಾಯಣದಲ್ಲಿ ವರ್ಣನೆಯೇ ಹೆಚ್ಚಾಗಿದ್ದರೆ ಈ ಜನಪ್ರಿಯ ರಾಮಾಯಣದಲ್ಲಿ ಸಣ್ಣ ಸಣ್ಣ ಕಥೆಯ ಮೂಲಕವೇ ವರ್ಣನೆಯು ಕಾಣಿಸಿಕೊಳ್ಳುವಂತೆ ಮಾಡಲಾಗಿದೆ ಎಂದು ಲೇಖಕರು ಹೇಳಿದ್ದಾರೆ.

About the Author

ಈಶ್ವರಚಂದ್ರ ಚಿಂತಾಮಣಿ
(10 May 1926)

ಈಶ್ವರಚಂದ್ರ ಅಮಗೌಡ ಚಿಂತಾಮಣಿ ಅವರು ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ಬಿಜ್ಜರಗಿಯಲ್ಲಿ 10-05-1926 ರಲ್ಲಿ ಜನಿಸಿದರು. ತಂದೆ ಅಮಗೌಡ ಸೋಮಲಿಂಗ ಚಿಂತಾಮಣಿ, ತಾಯಿ ನಾಗಮ್ಮ. 1942ರ ಚಲೇಜಾವ್ ಚಳವಳಿಯಲ್ಲಿ ಹೈಸ್ಕೂಲು ವಿದ್ಯಾರ್ಥಿಗಳೊಡನೆ ಜೈಲು ಸೇರಿದರು. ಇವರ ಕಾವ್ಯನಾಮ “ಪಾರ್ವತೀಶ”. ತಮ್ಮ ಸ್ವಂತ ಊರಿನಲ್ಲಿ ಸ್ತ್ರೀಯರು ಹಾಡುವ ಸಂಪ್ರದಾಯದ ಹಾಡುಗಳಿಂದ ಆಕರ್ಷಿತರಾದರು. ಜನಪದ ಹಾಡುಗಳನ್ನು ಸಂಗ್ರಹಿಸುವ ಹವ್ಯಾಸ ಬೆಳೆಸಿಕೊಂಡರು. 1946 ರಿಂದಲೇ ಜನಪದ ಸಾಹಿತ್ಯ ಕುರಿತು ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯಲು ಆರಂಭಿಸಿದರು. ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದರು. 1954 ರಲ್ಲಿ ಜಮಖಂಡಿಯ ಕರ್ನಾಟಕ ಸಾಹಿತ್ಯ ಮಂದಿರದಿಂದ ‘ಗರತಿಯರ ಮನೆಯಿಂದ’ ಎಂಬ ಜಾನಪದ ಗ್ರಂಥ ಪ್ರಕಟವಾಯಿತು.ಜಾನಪದ ಇತರ ...

READ MORE

Related Books