ಡೆಹ್ರಾಡೂನ್ ನಗರದಲ್ಲಿ ವಾಸಿಸುತ್ತಿರುವ ಸಂಜಯ್ ಸೋಂಧಿ ಅವರು ಹಲವಾರು ಲೇಖನಗಳನ್ನು ಬರೆದು ಮಕ್ಕಳ ಸಾಹಿತ್ಯದಲ್ಲೂ ತಮ್ಮ ಸಾಹಿತ್ಯ ಕೊಡುಗೆ ನೀಡಿದ್ದಾರೆ. ಇವರ ಬರಹವನ್ನು ಮಕ್ಕಳ ಸಾಹಿತ್ಯ ಲೋಕಕ್ಕೆ ಕನ್ನಡದಲ್ಲಿ ಅನುವಾದಿಸಿದವರು ಪರಿಸರವಾದಿ, ಪತ್ರಕರ್ತರಾದ ನಾಗೇಶ ಹೆಗಡೆಯವರು.
ಈ ಪುಸ್ತಕದಲ್ಲಿರುವ ಅನೇಕ ಸರಳ ಕತೆಗಳು ಮಕ್ಕಳ ವಿಸ್ಮಯ, ಕುತೂಹಲವನ್ನು ಹೆಚ್ಚಿಸುವ ಮತ್ತು ಡೆಹ್ರಾಡೂನ್ ನಿಸರ್ಗದ ಪರಿಚಯವನ್ನು ಸರಳವಾಗಿ ವರ್ಣರಂಜಿತ ಚಿತ್ರಗಳಿಂದ ಮಕ್ಕಳಿಗೆಸರಳ ಕತೆಗಳ ಮೂಲಕ ನೀಡಲಾಗಿದೆ. ಜೀವಲೋಕದ ವೈವಿಧ್ಯಮಯ ಪಕ್ಷಿಗಳು, ಚಿಟ್ಟೆಗಳು, ಕೀಟಗಳು, ಕಪ್ಪೆಗಳು, ಮರಗಪ್ಪೆಗಳು, ಕಾಡು ಬೆಕ್ಕು, ಹೀಗೆ ಅನೇಕ ಜೀವಿಗಳನ್ನು ಮಕ್ಕಳಿಗೆ ಪರಿಚಯಿಸುವ ಕಥೆಗಳಿವೆ. ನುಣುಚಿ ಓಡುವ ಇಣಚಿ, ಹಾವುಗಳಿಗೆ ಹೆದರದ ಮುಂಗುಸಿ, ಮರೆಯಾಗುತ್ತಿರುವ ಮನೆಗುಬ್ಬಿಗಳು, ಪಟರ್ ಪಟರ್ ಪಾರಿವಾಳ, ಅದು ಕುಪ್ಪಳ ಕಪ್ಪೆ, ಇದು ನಂಜಿನ ನೆಲಗಪ್ಪೆ, ಎಲ್ಲಿ ನೋಡಿದರಲ್ಲಿ ಹಲ್ಲಿ, ಓತಿ ,ಹಾಗೇಕೆ ತಲೆ ಹಾಕುತಿ ಹೀಗೆ ಅನೇಕ ಕಥೆಗಳು ಮಕ್ಕಳಿಗಾಗಿ ಇಲ್ಲಿವೆ.
©2021 Bookbrahma.com, All Rights Reserved