
ಚಂದ್ರ ಚುಕ್ಕಿಗಳು- ಲಲಿತಾ ಕೆ.ಹೊಸಪ್ಯಾಟಿ ಅವರು ಮಕ್ಕಳಿಗಾಗಿ ಬರೆದ ಕೃತಿ. ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಲಲಿತಾ ಅವರು ಹೆಚ್ಚು ಸಮಯವನ್ನು ಮಕ್ಕಳೊಂದಿಗೆ ಕಳೆಯುತ್ತಾರೆ. ಹಾಗಾಗಿ ಮಕ್ಕಳ ಬೇಕು ಬೇಡಗಳು ಅವರ ಅನುಭವಕ್ಕೆ ಹೆಚ್ಚು ಬಂದಿರುತ್ತವೆ. ವೃತ್ತಿಯ ಜೊತೆಗೆ ಬರವಣಿಗೆ ಹವ್ಯಾಸವನ್ನು ಇರಿಸಿಕೊಂಡಿರುವ ಲಲಿತಾ ಅವರು ಮಕ್ಕಳಿಗಾಗಿ ವಿಶೇಷ ರೀತಿಯ ಸಾಹಿತ್ಯ ರಚಿಸುತ್ತಾರೆ. ಮಕ್ಕಳಿಗಾಗಿ ವಿಭಿನ್ನ ಕಥೆಗಳನ್ನು ರಚಿಸಿರುವ ಲಲಿತಾ ಕೆ.ಹೊಸಪ್ಯಾಟಿ ಅವರಿಗೆ 2016ನೇ ಸಾಲಿನ ಜಿ.ಬಿ.ಹೊಂಬಳ ಪುರಸ್ಕಾರ ಲಭಿಸಿದೆ. ಕೃತಿಯಲ್ಲಿ ಪ್ರಾಮಾಣಿಕವಾಗಿ ಬದುಕುವ, ಒಳ್ಳೆಯ ಗುಣಗಳನ್ನು ಅಳವಡಿಸಿಕೊಳ್ಳುವ ನೀತಿಕಥೆಗಳನ್ನು ಹೇಳಲಾಗಿದೆ.
©2025 Book Brahma Private Limited.