
‘ಮೊಟ್ಟೆಯೊಡೆದ ಮರಿಗಳು’ ಶಾರದಾ ವಿ. ಮೂರ್ತಿ ಅವರು ಮಕ್ಕಳಿಗಾಗಿ ಬರೆದ ಕಥಾ ಸಂಕಲನ. ಮಕ್ಕಳ ಮಾನಸಿಕ, ಭಾವನಾತ್ಮಕ, ಶೈಕ್ಷಣಿಕ ಸಮಸ್ಯೆಗಳನ್ನೆತ್ತಿ ಕೊಂಡು ಅವುಗಳಿಗೆ ಪರಿಹಾರ ಹುಡುಕಲು ಯತ್ನಿಸಲಾಗಿದೆ.
ಕಥಾ ನಿರೂಪಣ ತಂತ್ರ ಅತ್ಯಂತ ಸರಳ ಹಾಗೂ ನೇರ. ಬರವಣಿಗೆಯ ಶೈಲಿ ಜನಾಕರ್ಷಕವಾಗಿದ್ದು ಇದೊಂದು ಸಾರ್ಥಕ ಕೃತಿ ಎನ್ನಬಹುದು. ಪ್ರತಿ ಕಥೆಯೂ ನೀತಿ ಬೋಧಕವಾಗಿದೆ. ಸರಳ ಭಾಷೆಯಲ್ಲಿ ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಇಲ್ಲಿಯ ಕಥೆಗಳನ್ನು ನಿರೂಪಿಸಲಾಗಿದೆ. ಈ ಕೃತಿಗೆ 2017ನೇ ಸಾಲಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಪ್ರಶಸ್ತಿ ಲಭಿಸಿದೆ
©2025 Book Brahma Private Limited.