ತಾಮ್ರ ಕರ್ಣಿ

Author : ಕೆ. ಎಸ್. ನಳಿನಿ

Pages 100

₹ 100.00




Year of Publication: 2019
Published by: ಸಾಹಿತ್ಯ ಸುಗ್ಗಿ ಪ್ರಕಾಶನ
Address: # 40, 1ನೇ ಮುಖ್ಯರಸ್ತೆ, 2ನೇ ಹಂತ, 3ನೇ ಬ್ಲಾಕ್, ನಾಗರಬಾವಿ, ಬೆಂಗಳೂರು-560072

Synopsys

ತಾಮ್ರ ಕರ್ಣಿ ನಳಿನಿ ಕೆ.ಎಸ್‌ ಅವರ ಮಕ್ಕಳ ಕಥಾಸಂಕಲನವಾಗಿದೆ. ಈಗಿನ ಯಾಂತ್ರಿಕ ಯುಗದಲ್ಲಿ ಮಕ್ಕಳಿಗೆ ಕತೆ ಕೇಳಿ ಅವರ ಕುತೂಹಲಕ್ಕೆ ತಂಪೆರೆದು, ಆ ಸಣ್ಣ ಮಕ್ಕಳು, ಬೌದ್ಧಿಕವಾಗಿ ಹಾಗೂ ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ನಾಂದಿಯಾಗುವಂತೆ ಮಾಡುವ ಸಮಯ ಇಂದಿನ ತಂದೆ-ತಾಯಂದಿರಿಗೆ ಇಲ್ಲ. ಇದ್ದರೂ ಬೆರಳೆಣಿಕೆಯಷ್ಟು ಮಾತ್ರ ಯಾವುದೇ ಬಂಧು-ಬಳಗ, ಬಾಂಧವ್ಯಗಳೂ ಇಲ್ಲದಂತೆ ತಮ್ಮಲ್ಲಿರುವ ಯಂತ್ರಗಳೇ ತಮ್ಮ ಸಹಜೀವಿಗಳು ಎಂಬ ತೀರ್ಮಾನಕ್ಕೆ ಬಂದುಬಿಟ್ಟಿದ್ದಾರೆ. ಇಂತಹ ಸಂದರ್ಭದಲ್ಲಿ ನನಗೆ ಅನ್ನಿಸಿದ್ದು, ಮಕ್ಕಳಿಗಾಗಿ ಕೆಲವು ಕಥೆಗಳನ್ನು ಬರೆದರೆ ಅದನ್ನು ಮನೆಯ ಹಿರಿಯರು ಓದಿಯಾದರೂ ಮಕ್ಕಳಿಗೆ ಹೇಳುತ್ತಾರೆ. ಹಾಗಾಗಿ ಮಕ್ಕಳಿಗೆ ಇಷ್ಟವಾದ ಪ್ರಾಣಿ, ಪಕ್ಷಿಗಳು, ಗೊಂಬೆಗಳು ಇವುಗಳನ್ನೇ ಕಥಾವಸ್ತುಗಳನ್ನಾಗಿ ತೆಗೆದುಕೊಂಡು ಕಥೆ ಹೆಣೆಯಲಾಗಿದೆ. ಮಕ್ಕಳಿಗೆ ಈ ಕತೆಗಳಿಲದ ಸಂತೋಷವಾದರೆ ಲೇಖಕರ ಶ್ರಮ ಸಾರ್ಥಕ ಎಂದು ಸಾಹಿತ್ಯ ಸುಗ್ಗಿ ಪ್ರಕಾಶಕರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಕೆ. ಎಸ್. ನಳಿನಿ

ಕೆ. ಎಸ್. ನಳಿನಿ ಅವರು ಮೂಲತಃ ಕುಶಾಲನಗರ ತಾಲೂಕಿನ ಕಣಿವೆ ಎಂಬ ಗ್ರಾಮದವರು. ತಂದೆ ಎನ್. ಸುಬ್ಬರಾಯ ಸುಬ್ಬಲಕ್ಷ್ಮಮ್ಮ ತಾಯಿ. ಪ್ರಾಥಮಿಕ ವಿದ್ಯಾಭ್ಯಾಸವನ್ನು ಕಣಿವೆಯಲ್ಲಿ ಮುಗಿಸಿ, ಪ್ರೌಢ ಶಿಕ್ಷಣವನ್ನು ತಿಪಟೂರು ಹಾಗು ಕುಶಾಲನಗರದ ಫಾತಿಮಾ ಶಾಲೆಯಲ್ಲಿ ಪೂರ್ಣಗೊಳಿಸಿದರು. ಹಾಸನಕಾಲೇಜಿನಲ್ಲಿ ಹಿಂದಿಯಲ್ಲಿ ಬಿ. ಎ. ಬಿಎಡ್ ಪದವಿಯನ್ನು ಮುಗಿಸಿ 1985 ರಲ್ಲಿ ಶಿಕ್ಷಕಿಯಾಗಿ ಸರಕಾರಿ ಶಾಲೆ ತೊರೆನೂರಿನಲ್ಲಿ ಕರ್ತವ್ಯ ನಿರ್ವಹಿಸಿರುತ್ತಾರೆ. ಹೊಸಕೋಟೆ ಪ್ರೌಢ ಶಾಲೆಯಲ್ಲಿ ಹಿಂದಿ ಶಿಕ್ಷಕಿಯಾಗಿ ನಿಯೋಜನೆಗೊಂಡು, ನಿವೃತ್ತಿ ಹೊಂದಿದ ನಂತರ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಪ್ರಸ್ತುತ ಅಂದಾಜು 90 ರಷ್ಟು, ಅಂತರ್ಜಾಲದಲ್ಲಿ ಕವನ ಮತ್ತು ಕಥೆಗಳ ಬರೆದಿರುತ್ತಾರೆ.  ಕೃತಿಗಳು: ತಾಮ್ರಕರ್ಣಿ ,ಜೀವನಾಡಿ ...

READ MORE

Related Books