
‘ಹಿಡಿಂಬನ ತೋಟ’ ಲೇಖಕ ಎನ್. ಶ್ರೀನಿವಾಸ ಉಡುಪ ಅವರು ರಚಿಸಿರುವ ಮಕ್ಕಳ ನಾಟಕವಿದು. ರಾಕ್ಷಸ ಹಿಡಿಂಬ ಮತ್ತು ಆತನ ತೋಟದ ಬಗ್ಗೆ ಕತೆ ಹೊಸೆಯಲಾಗಿದೆ. ಮಕ್ಕಳಿಂದ ತುಂಬಿದ್ದ ಸುಂದರ ತೋಟಕ್ಕೆ ಮಕ್ಕಳನ್ನು ಬರದಂತೆ ಮಾಡುತ್ತಾನೆ ಹಿಡಿಂಬ, ಆತನ ಕ್ರೌರ್ಯಕ್ಕೆ ಅಂಜಿ ವಸಂತ ಋತುವೂ ಆತನ ತೋಟಕ್ಕೆ ಬರದಂತಾಗುತ್ತದೆ, ಆದ್ದರಿಂದ ಇಡೀ ತೋಟ ಬರಡಾಗುತ್ತದೆ ಇದರಿಂದ ಅರಿವು ಪಡೆದ ಹಿಡಿಂಬ ಮಕ್ಕಳನ್ನು ತೋಟಕ್ಕೆ ಆಹ್ವಾನಿಸುತ್ತಾನೆ. ಆಗ ಮತ್ತೆ ವಸಂತವೂ ಬಂದು ತೋಟ ನಳನಳಿಸುತ್ತದೆ. ಇಂಥಾದ್ದೊಂದು ಕತೆಯ ಜೊತೆಗೆ ಮಕ್ಕಳಲ್ಲಿ ಪರಿಸರದ ಬಗ್ಗೆ ಕಾಳಜಿ ಮೂಡುವಂತೆ ಕತೆ ಹೆಣೆದಿದ್ದಾರೆ ಲೇಖಕರು.
©2025 Book Brahma Private Limited.