ಮಕ್ಕಳಿಗಾಗಿ ಮಹಾಭಾರತ

Author : ವಿವಿಧ ಲೇಖಕರು

Pages 81

₹ 110.00




Year of Publication: 2016
Published by: ವಾಸನ್ ಪಬ್ಲಿಕೇಷನ್ಸ್
Address: # 25,ಸಂಪಾದಕ ಮಂಡಳಿ, ವಾಸನ್ ಟವರ್‍ಸ್, ಗುಡ್ ಶೆಡ್ ರಸ್ತೆ, ಟಿಸಿಎಂ ರಾಯನ್ ರಸ್ತೆ, ಸುಭಾಶನಗರ, ಕಾಟನ್ ಪೇಟೆ, ಬೆಂಗಳೂರು-560053

Synopsys

ಮಕ್ಕಳಿಗೆ ಮಹಾಭಾರತದ ಪರಿಚಯ ಮಾಡಿಕೊಡುವ ಉದ್ದೇಶದೊಂದಿಗೆ ವಿವಿಧ ಲೇಖಕರ ನೆರವಿನಿಂದ ವಾಸನ್ ಪಬ್ಲಿಕೇಷನ್ಸ್ ದವರು ಪ್ರಕಟಿಸಿದ ಕೃತಿ-ಮಕ್ಕಳಿಗಾಗಿ ಮಹಾಭಾರತ. ಮಕ್ಕಳಲ್ಲಿ ನೈತಿಕ ಶಿಕ್ಪಣ ನೀಡುವ ವ್ಯವಸ್ಥೆಯನ್ನು ಬಲಪಡಿಸುವುದು ಆರೋಗ್ಯವಂತ ಸಮಾಜದ ಉದ್ದೇಶವೂ ಆಗಿರುತ್ತದೆ. ತಪ್ಪಿದರೆ, ಸಮಾಜದ ನೈತಿಕ ಅಧಃಪತನ ಆರಂಭವಾದಂತೆ. ಭಾರತದ ಮಹಾಕಾವ್ಯಗಳ ಪೈಕಿ ರಾಮಾಯಣ ಹಾಗೂ ಮಹಾಭಾರತ ಪ್ರಮುಖವಾದವು. ರಾಮಾಯಣವು ಬದುಕಿನ ಆದರ್ಶವನ್ನು ಪ್ರತಿಪಾದಿಸಿದರೆ, ಮಹಾಭಾರತವು ಬದುಕಿನ ರೀತಿ ಹಾಗೂ ಎದುರಿಸುವ ಪರಿಗಳನ್ನು ಅನಾವರಣಗೊಳಿಸುತ್ತದೆ. ಮಕ್ಕಳಿಗೆ ಬದುಕಿನ ಆದರ್ಶ ಹಾಗೂ ಬದುಕಿನ ಕಾಠಿಣ್ಯ ಎರಡರ ಪರಿಚಯವೂ ಇರಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಕೃತಿಯು ಮಹತ್ವ ಪಡೆಯುತ್ತದೆ. ಮುಖ್ಯವಾಗಿ, ಭಗವದ್ಗೀತೆಯು ಬದುಕಿನ ರೀತಿಯನ್ನು, ಆದರ್ಶವನ್ನು ಒಟ್ಟಿನಲ್ಲಿ ಸ್ವರೂಪ-ಸ್ವಭಾವಗಳನ್ನು ತಿಳಿಸುತ್ತದೆ.

About the Author

ವಿವಿಧ ಲೇಖಕರು

. ...

READ MORE

Related Books