
ವಕೀಲರಾಗಿ, ಜನಸಂಘದ ಸಕ್ರಿಯ ಕಾರ್ಯಕರ್ತರಾಗಿದ್ದ ಈಶ್ವರ ಭಟ್, ಆಗಿನ ಪ್ರಧಾನಿ ಇಂದಿರಾಗಾಂಧಿ ಅವರು ಭಾರತದ ಮೇಲೆ ಹೇರಿದ್ದ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಹೋರಾಟ ಮಾಡಿದ್ದರು. ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಎಂಬ ಅಭಿಪ್ರಾಯ ಹೊಂದಿದ್ದು, ಹೋರಾಟ ಕೂಡ ನಡೆಸಿದ್ದರು. ವಕೀಲರಾಗಿ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದ ಅವರ ಜೀವನ-ಸಾಧನೆಯನ್ನು ಈ ಪುಸ್ತಕ ಕಟ್ಟಿಕೊಡುತ್ತದೆ. ಕಾಂತಾವರ ಕನ್ನಡ ಸಂಘದ ’ನಾಡಿಗೆ ನಮಸ್ಕಾರ’ ಸರಣಿಯ 199ನೇ ಪುಸ್ತಕವಿದು.
©2025 Book Brahma Private Limited.