ಅಕ್ಕೂರಮಠರ ಸಮಗ್ರ ಸಾಹಿತ್ಯ ಸಂಪುಟ - ೧

Author : ಷಣ್ಮುಖಯ್ಯ ಅಕ್ಕೂರಮಠ

Pages 484

₹ 500.00




Year of Publication: 2020
Published by: ಅನುಪಮಾ ಪ್ರಕಾಶ
Address: ಅಥಣಿ, ಸಾವಿತ್ರಿ ಸಾಧನ್, ಸತ್ಯಪ್ರಮೋದ್ ನಗರ, ಬೆಳಗಾವಿ ಜಿಲ್ಲೆ, ಅಥಣಿ - 591304
Phone: 9449625025

Synopsys

ಸಂಸ್ಕೃತ ಸಾಹಿತ್ಯ, ಕಾವ್ಯ, ಚಂಪೂಕಾವ್ಯ, ನಾಟಕಗಳು, ಛಂದಸ್ಸು, ವ್ಯಾಕರಣ ಮೊದಲಾದ ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡಿದ ಷಣ್ಮುಗಯ್ಯ ಅಕ್ಕೂರಮಠ ಅವರ ಸಮಗ್ರ ವಚನ ಸಾಹಿತ್ಯದ ಲೇಖನಗಳ ಸಂಗ್ರಹ ಈ ಬೃಹತ್‌ ಕೃತಿಯಾಗಿದೆ.

“ವರ್ಣ-ಜಾತಿ : ವಚನಕಾರರ ಪರಿಕಲ್ಪನೆ, ವಚನಗಳಲ್ಲಿ ಭೌತಿಕವಾದ, ಬಸವೇಶ್ವರ ಮತ್ತು ಸಂಸ್ಕೃತ, ವಚನಗಳಲ್ಲಿ ವಿಡಂಬನೆಯ ಸ್ವರೂಪ, ಕಾಯಕ ದಾಸೋಹ ತತ್ವಗಳಲ್ಲಿರುವ ನೈತಿಕ ಮೌಲ್ಯಗಳು, ಶರಣರ ಸಾಮಾಜಿಕ ಚಿಂತನೆ, ಭವಿ-ಭಕ್ತ ಪರಿಕಲ್ಪನೆ, ವಚನ ಚಿಂತನ, ಶರಣರು ವೈದಿಕ ಸಂಸ್ಕೃತಿಯ ವಿರೋಧಿಗಳೇ?, ವಚನ ತರಂಗ, ಶರಣರ ಅನುಭಾವ-ಅನುಸಂಧಾನ, ಅಲ್ಲಮನ 'ಪ್ರಭುಗೀತ' ಅವಲೋಕನ, ವಚನ ಚಿಂತನ” ಮುಂತಾದ ವಚನ ಸಾಹಿತ್ಯದ 29 ಬರಹಗಳನ್ನು ಒಳಗೊಂಡಿದೆ.

About the Author

ಷಣ್ಮುಖಯ್ಯ ಅಕ್ಕೂರಮಠ

ಷಣ್ಮುಗಯ್ಯ ಅಕ್ಕೂರಮಠ ಅವರು ಗದಗ ಜಿಲ್ಲೆ, ಶಿರಹಟ್ಟಿ ತಾಲ್ಲೂಕು, ಬೂದಿಹಾಳ ಗ್ರಾಮದಲ್ಲಿ 1939 ಆಗಸ್ಟ್‌ 23ರಂದು ಜನಿಸಿದರು. ತಂದೆ ವೀರಪ್ಪಯ್ಯ ಶಾಸ್ತ್ರಿ ಅಕ್ಕೂರಮಠ, ತಾಯಿ ಬಸವಲಿಂಗಾಂಬೆ. ಸಂಸ್ಕೃತದಲ್ಲಿ ಅಪಾರ ಆಸಕ್ತಿ ತಳೆದಿದ್ದರು. ಸಂಸ್ಕೃತ ಸಾಹಿತ್ಯ, ಕಾವ್ಯ, ಚಂಪೂಕಾವ್ಯ, ನಾಟಕಗಳು, ಛಂದಸ್ಸು, ವ್ಯಾಕರಣ, ತರ್ಕ ಮೊದಲಾದ ವಿಷಯಗಳ ಅಧ್ಯಯನ ಮಾಡಿದರು. ಸ್ನಾತಕೋತ್ತರ ಪದವೀಧರರು. 1970ರಲ್ಲಿ ಪ್ರಯಾಗ ವಿಶ್ವವಿದ್ಯಾನಿಲಯದ (ಉತ್ತರ ಪ್ರದೇಶ)ದಿಂದ ಸಾಹಿತ್ಯರತ್ನವನ್ನೂ ಪಡೆದರು. 1983ರಲ್ಲಿ ಮೈಸೂರು ರೀಜನಲ್ ಕಾಲೇಜ್ ಆಫ್ ಎಜುಕೇಷನ್ ಸಂಸ್ಥೆಯಿಂದ ಬಿ.ಎಡ್., ಪದವೀಧರರು. ವೃತ್ತಿಯಲ್ಲಿ ಅಧ್ಯಾಪಕರಾಗಿದ್ದರು.  ಆರೂಢ ಸಂಪ್ರದಾಯದ ಸದ್ಗುರು ಬಾಬಾ ಪ್ರಶಸ್ತಿ, ಶಿವಕಮಲ ಸಾಹಿತ್ಯ ಪ್ರಶಸ್ತಿ, ...

READ MORE

Related Books