
`ಸಮಗ್ರ ಸಾಹಿತ್ಯ' ಬಿ.ಜಿ ಸತ್ಯಮೂರ್ತಿ ಅವರ ಕೃತಿಯಾಗಿದೆ. 1951ರಲ್ಲಿ ಪ್ರಾರಂಭವಾದ ದಶಕದಿಂದ ನಾಲ್ಕು ದಶಕಗಳ ಕಾಲ ಕರ್ನಾಟಕದ ಚಿಂತನ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಪ್ರಮುಖವಾಗಿ ಕೇಳಿಬರುತ್ತಿದ್ದ ಹೆಸರುಗಳಲ್ಲಿ ಒಂದು ಶ್ರೀ ಹ.ವೆಂ. ನಾಗರಾಜ ರಾಯರದು. ವಿಸ್ತಾರವಾದ ಅರಿವಿನ ಅಸ್ತಿ ಬಾರದ ಮೇಲೆ ರಚಿಸಿದ ಸಂಪಾದಕೀಯಗಳಿಗೆ ಪ್ರಜಾಮತವು ಹೆಸರಾಗಿತ್ತು. ನಾಗರಾಜರಾಯರು ಡಿ.ವಿ.ಜಿ., ವಿ.ಸೀ. ಇಂತಹ ಮಹನೀಯರಿಂದ ಲೇಖನಗಳನ್ನು ಪಡೆಯುವುದರಲ್ಲಿ ಸಫಲರಾಗಿದ್ದರು. ಪ್ರಜಾಮತ ದೀಪಾವಳಿ ವಿಶೇಷಾಂಕಗಳಿಗಾಗಿ ಓದುಗರು ಉತ್ಸಾಹದಿಂದ ಕಾಯುತ್ತಿದ್ದರು. ಪತ್ರಿಕೋದ್ಯಮದ ಹೊರ ಜಗತ್ತಿನಲ್ಲಿಯೂ ನಾಗರಾಜರಾಯರ ಹೆಸರು ಪರಿಚಿತವಾಗಿತ್ತು. ನಾಗರಾಜರಾಯರು ತಾವು ಮೆಚ್ಚಿದ ಪ್ರತಿಭಾವಂತರನ್ನು ಕನ್ನಡಿಗರಿಗೆ ಸೊಗಸಾದ ಲೇಖನಗಳಲ್ಲಿ ಪರಿಚಯ ಮಾಡಿಕೊಟ್ಟರು. ಇದು ಅವರ ಆಸಕ್ತಿಗಳ ವೈವಿಧ್ಯಕ್ಕೆ ಕನ್ನಡಿ. ಓದಲು ಸುಲಭವಲ್ಲದ ಸಾಹಿತ್ಯದಲ್ಲಿ ಹೊಸಯುಗವನ್ನೇ ಪ್ರಾರಂಭಿಸಿದ ಈತನ ವ್ಯಕ್ತಿತ್ವ, ಕಾವ್ಯ, ವಿಮರ್ಶೆ ಮೂರನ್ನೂ ನಾಗರಾಜರಾಯರು ಕೆಲವೇ ಪುಟಗಳಲ್ಲಿ ಮಾಡಿಕೊಡುತ್ತಾರೆ ಎನ್ನುತ್ತಾರೆ ಎಲ್.ಎಸ್. ಶೇಷಗಿರಿರಾವ್.
©2025 Book Brahma Private Limited.