ರೇಗಡಿ

Author : ಸ. ರಘುನಾಥ

Pages 800

₹ 650.00




Year of Publication: 2020
Published by: ನಿವೇದಿತ ಪ್ರಕಾಶನ
Address: #3437, 1ನೇ ಮಹಡಿ, 9ನೇ ಅಡ್ಡರಸ್ತೆ, ಶಾ್ಸ್ತ್ರಿ ನಗರ, ಬನಶಂಕರಿ, ಬೆಂಗಳೂರು-28
Phone: 9448733323

Synopsys

ಸ. ರಘುನಾಥ ಅವರ ಸಮಗ್ರ ಸಾಹಿತ್ಯ ಸಂಪುಟ-5ರ ಭಾಗವಾಗಿರುವ ಕೃತಿ-ರೇಗಡಿ. ಲೇಖಕ ಸ. ರಘುನಾಥರ ಈ ಕೃತಿಯ ಲೇಖನಗಳನ್ನು 5 ಭಾಗಗಳಲ್ಲಿ ವಿಂಗಡಿಸಿದ್ದು, ಭಾಗ-1 ಗೂಡೆ, ಭಾಗ-2 ಚಟಿಕೆ-ತಂಬೂರಿ, ಭಾಗ-3 ಕಡೆಗೋಲು, ಭಾಗ-4 ಸಸಿಗಳು, ಭಾಗ-5 ತಾಲಿಲ್ಲೋ ಲಿಲ್ಲೇ ಲಿಲ್ಲಾಯಿಲೆ ಸೇರಿದಂತೆ ಒಟ್ಟು 178 ಲೇಖನಗಳಿವೆ. ‘ರೇಗಡಿ ಎಂದರೆ ಮಣ್ಣು, ವ್ಯವಸಾಯಕ್ಕೆ ಯೋಗ್ಯವಾದ ಮಣ್ಣು. ಕೆಂಪು ರೇಗಡಿ ಹಾಗೂ ಕಪ್ಪು ರೇಗಡಿ ಎಂದು ಎರಡು ವಿಧ. ಇಲ್ಲಿಯ ಲೇಖನಗಳು ಈ ಮಣ್ಣುಗಳ ಸಾವಯವ ಗುಣ ವಾಸನೆಯವು. ಎಂಬ ವಿಶ್ವಾಸ ತಳೆದು, ಬರೆದ ಲೇಖನಗಳಲ್ಲಿ ನನ್ನ ಹುಡುಕಿ ಸಿಕ್ಕಷ್ಟನ್ನ ಸಮಗ್ರ ಸಂಕಲನದಲ್ಲಿ ಸೇರಿಸಿದೆ’ ಎಂದು ಲೇಖಕರು ಹೇಳಿಕೊಂಡಿದ್ದಾರೆ.

About the Author

ಸ. ರಘುನಾಥ
(13 August 1954)

ಪ್ರಾಥಮಿಕ ಶಾಲಾ ಶಿಕ್ಷಕರಾಗಿರುವ  ಸ.ರಘುನಾಥ,ಕಥೆ, ಕಾವ್ಯ, ವಿಮರ್ಶೆ, ಅಂಕಣಬರಹ, ಅನುವಾದ, ಜಾನಪದ ಸಾಹಿತ್ಯ ಸಂಗ್ರಹ,ಮುಂತಾದ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿದವರು. ಸುಮಾರು 40ಕ್ಕೂ ಹೆಚ್ಚಿನ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ ಸ. ರಘುನಾಥ ಅವರು ಸಮಾಜಸೇವೆಯಲ್ಲಿಯೂ ಹೆಚ್ಚಾಗಿ ತೊಡಗಿಸಿಕೊಂಡವರು. 1995 ರಿಂದ ’ನಮ್ಮ ಮಕ್ಕಳು’ ಎಂಬ ಸಂಸ್ಥೆಯ ಮೂಲಕ ಸಾಮಾಜಿಕ ಕಾರ್ಯ: ಭಿಕ್ಷುಕ, ಅನಾಥ, ವೃದ್ಧರಿಗೆ, ಅಂಗವಿಕಲರಿಗೆ ಶೈಕ್ಷಣಿಕ ಹಾಗು ಉಚಿತ ವೈದ್ಯಕೀಯ ನೆರವು. 1994 ರಿಂದ 2014 ರವರೆಗೆ ಗಾಯಗೊಂಡ ಪ್ರಾಣಿ  - ಪಕ್ಷಿಗಳ ಆರೈಕೆ. 2005ರಿಂದ ನಾಟಿ ಔಷಧ ತಯಾರಿಕೆ, ಉಚಿತ ...

READ MORE

Related Books